ಆತ್ಮಹತ್ಯೆ ವೇಳೆ ಬಾವಿಗೆ ಬಿದ್ದು ಮೃತ್ಯು
Update: 2021-11-03 21:02 IST
ಕಾರ್ಕಳ, ನ.3: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ.3ರಂದು ಬೆಳಗ್ಗೆ 7ಗಂಟೆ ಸುಮಾರಿಗೆ ಮಾಳ ಗ್ರಾಮದ ಮಂಜಲ್ತಾರು ಕಡಾರಿ ಬಳಿ ನಡೆದಿದೆ.
ಮೃತರನ್ನು ಕಡಾರಿ ಬಳಿ ನಿವಾಸಿ ಸುಂದರಿ ಎಂಬವರ ಮಗ ಭೋಜ (37) ಎಂದು ಗುರುತಿಸಲಾಗಿದೆ. ಮದ್ಯಪಾನ ಮಾಡುವ ಚಟ ಹಾಗೂ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು, ಜೀವನದಲ್ಲಿ ಜುಗುಪ್ಸೆ ಹೊಂದಿ ಮನೆ ಸಮೀಪದ ಬಾವಿಯ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು.
ಈ ವೇಳೆ ನೇಣಿನ ಗಂಟು ಜಾರಿದ ಪರಿಣಾಮ ಅವರು ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.