×
Ad

ದೀಪಾವಳಿಯ ಪ್ರಯುಕ್ತ ಮೂರು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

Update: 2021-11-03 21:09 IST

ಉಡುಪಿ, ನ.3: ಉಡುಪಿಯ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಕಿನ ಹಬ್ಬವಾದ ದೀಪಾವಳಿಯ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕೊಡವೂರು ವಾರ್ಡಿನ ಎರಡು ಹಾಗೂ ಸುಬ್ರಹ್ಮಣ್ಯ ನಗರ ವಾರ್ಡಿನ ಒಂದು ಮನೆಗಳಿಗೆ ಉಚಿತ ವಿದ್ಯುತ್ ಸಂಪಕವರ್ನ್ನು ಬುಧವಾರ ಕಲ್ಪಿಸಲಾಯಿತು.

ಕಾರ್ಯಕ್ರಮವನ್ನು ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್, ಸ್ಥಳೀಯ ನಗರಸಭಾ ಸದಸ್ಯರುಗಳಾದ ವಿಜಯ್ ಕೊಡವೂರು, ಜಯಂತಿ ಪೂಜಾರಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ. ವಸಂತ ಭಟ್, ದಾನಿಗಳಾದ ನಮಿತಾ ದೇವಾನಂದ ಉಪಾಧ್ಯಾಯ, ದೇವಾನಂದ ಉಪಾಧ್ಯಾಯ, ಡಾ.ಶೃತಿ ಆಚಾರ್ಯ, ಸುಜಾತ ಕಾಮತ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬ್ಬಾರ್, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News