×
Ad

ಬಸ್‌ನಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ ಆರೋಪ: ಓರ್ವ ಪೊಲೀಸ್ ವಶಕ್ಕೆ

Update: 2021-11-03 21:11 IST

ಮಂಗಳೂರು, ನ.3: ತಲಪಾಡಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಟಿ ಬಸ್‌ನಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ವ್ಯಕ್ತಿಯನ್ನು ಮಡಿಕೇರಿಯ ಯೂಸುಫ್(40)ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ ಯೂಸುಫ್  ಮೊಬೈಲ್‌ನಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು,  ಇದನ್ನು ಪ್ರಯಾಣಿಕರೋರ್ವರು ಗಮನಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರು ಯೂಸುಫ್ ಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಈ ಬಗ್ಗೆ ಬಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಕಂಕನಾಡಿ ನಗರ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News