×
Ad

ಮೊಬೈಲ್ ಅಂಗಡಿಯಿಂದ ಕಳವು

Update: 2021-11-03 21:58 IST

ಮಂಗಳೂರು, ನ.3: ಮೊಬೈಲ್ ಅಂಗಡಿಯೊಂದರಿಂದ ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಫೋನ್‌ಗಳು ಕಳವಾದ ಘಟನೆ ಹಳೆಯಂಗಡಿ ಗ್ರಾಮದ ಪಂಡಿತ್ ಹರಿಭಟ್ ಎಂಬಲ್ಲಿ ಬುಧವಾರ ನಡೆದಿದೆ.

ಸುನಿಲ್ ಗಂಗಾಧರ್ ಪೂಜಾರಿ ಎಂಬವರ ಒಡೆತನದ ದುರ್ಗಾ ಭಗವತಿ ಎಂಟರ್ ಪ್ರೈಸೆಸ್ ಎಂಬ ಮೊಬೈಲ್ ಅಂಗಡಿಯಲ್ಲಿ ಈ ಕಳವು ನಡೆದಿದೆ. ಅಂಗಡಿಯ ಮೇಲ್ಛಾವಣಿಯಲ್ಲಿ ಅಳವಡಿಸಿದ ತಗಡು ಶೀಟನ್ನು ಸರಿಸಿ ಒಳನುಗ್ಗಿದ್ದಾರೆ. ಸುಮಾರು 60,635 ರೂ. ಮೌಲ್ಯದ ಮೊಬೈಲ್ ಫೋನ್‌ಗಳನ್ನು, ಸಿಸಿಟಿವಿ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News