×
Ad

ಸೋನಾ ಬಝಾರ್ ಜ್ಯುವೆಲ್ಲರಿ ಮಾಲಕ ಮುಹಮ್ಮದ್ ಕುಂಞಿ ಹಾಜಿ‌ ನಿಧನ

Update: 2021-11-04 09:15 IST

ಮಂಗಳೂರು, ನ.4: ಸೋನಾ ಬಝಾರ್ ಜ್ಯುವೆಲ್ಲರಿಯ ಮಾಲಕ ಮುಹಮ್ಮದ್ ಕುಂಞಿ ಹಾಜಿ(75) ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ‌ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ 1 ಗಂಟೆ ಸುಮಾರಿಗೆ ನಿಧನರಾದರು.

ಮೂಲತಃ ಕೇರಳದ ಕುಂಬಳೆ ನಿವಾಸಿಯಾಗಿದ್ದ ಮುಹಮ್ಮದ್ ಕುಂಞಿ ಕಳೆದ 50 ವರ್ಷಗಳಿಂದ ಮಂಗಳೂರಿನಲ್ಲಿ ವ್ಯಾಪಾರವನ್ನು‌ ನಡೆಸುತ್ತಿದ್ದರು.

ಮಂಗಳೂರು-ಕೇರಳ ಮುಸ್ಲಿಂ ಜಮಾಅತ್‌ನ ಅಧ್ಯಕ್ಷರಾಗಿ, ಕಾಶಿಪಟ್ನದ ದಾರುನ್ನೂರು ಎಜುಕೇಶನ್ ಸೆಂಟರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮುಹಮ್ಮದ್ ಕುಂಞಿ ಹಲವು‌ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಕೊಂಡಿದ್ದರು. ಸರಳ ವ್ಯಕ್ತಿತ್ವದ ಅವರು ಓರ್ವ ಕೊಡುಗೈ ದಾನಿಯಾಗಿದ್ದರು.

ಮೃತರು ಪತ್ನಿಯರು, ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News