×
Ad

'ಮೂಲತ್ವ ವಿಶ್ವ ಪ್ರಶಸ್ತಿ'ಗೆ ಸುಕ್ರಿ ಬೊಮ್ಮಗೌಡ ಆಯ್ಕೆ

Update: 2021-11-04 17:54 IST

ಮಂಗಳೂರು: ನಗರದ ಮೂಲತ್ವ ಫಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ 7ನೇ ವರ್ಷದ 'ಮೂಲತ್ವ ವಿಶ್ವ ಪ್ರಶಸ್ತಿ'ಯನ್ನು ಉತ್ತರ ಕನ್ನಡ ಅಂಕೋಲ ತಾಲೂಕಿನ ಪದ್ಮಶ್ರೀ ಪುರಸ್ಕೃತ ಹಾಲಕ್ಕಿ ಸಮುದಾಯದ ಹೋರಾಟಗಾರ್ತಿ ಸುಕ್ರಿ ಬೊಮ್ಮಗೌಡ (ಸುಕ್ರಿ ಅಜ್ಜಿ) ಅವರಿಗೆ ನೀಡಲಾಗುವುದು ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೂಲತ್ವ ತಿಳಿಸಿದರು.

ನ.7ರಂದು ಸಂಜೆ 4.30ಕ್ಕೆ  ಅಂಕೋಲದ ಬಡಗೇರಿಯ ಅಲಗೇರಿಯಲ್ಲಿ ಸುಕ್ರಿ ಅಜ್ಜಿಯ ಮನೆಯ ಪರಿಸರದಲ್ಲಿ ಪ್ರಶಸ್ತ ಪ್ರದಾನ ನಡೆಯಲಿದೆ.

ಪ್ರಶಸ್ತಿ ಫಲಕದೊಂದಿಗೆ ರೂ.50,001 ನಗದು ನೀಡಲಾಗುವುದು. ಕಾರ್ಯಕ್ರಮದಲ್ಲಿ ಉ.ಕ. ಹಾಗೂ ದ.ಕ.  ಜಿಯ ಗಣ್ಯರು ಭಾಗವಹಿಸಲಿದ್ದಾರೆ. ಟ್ರಸ್ಟ್ 2015ರಿಂದ ಮೂಲತ್ವ ವಿಶ್ವ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಕೋವಿಡ್ ಕಾರಣಕ್ಕೆ ಹಿರಿಯರಾದ ಸುಕ್ರಿ ಅಜ್ಜಿಗೆ ಅವರ ಮನೆಯ ಪರಿಸರದಲ್ಲೇ ಪ್ರಶಸ್ತಿ ನೀಡಲಾಗುವುದು ಎಂದರು.  ಟ್ರಸ್ಟಿಗಳಾದ  ಕಲ್ಪನಾ ಕೋಟ್ಯಾನ್, ಶೈನಿ,  ಪ್ರಶಸ್ತಿ ಸಂಚಾಲಕಿ ಅಕ್ಷತಾ ಕದ್ರಿ, ಕಾರ್ಯದರ್ಶಿ ಮಹೇಶ್ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News