ಚಾ ಪ್ರಿಯರ ಫೇವರಿಟ್ ಸ್ಪಾಟ್ ಮಂಗಳೂರಿನ ಎಂಎಫ್‌ಸಿ
ಮಂಗಳೂರು : ಚಹಾ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಮಂಗಳೂರಿನ ಫಳ್ನೀರ್ ರಸ್ತೆಯ ಮಲಬಾರ್ ಗೋಲ್ಡ್ ಬಳಿಯಿರುವ 'ಮಂಗಳೂರು ಫೇವರಿಟ್ ಚಾಯ್'(ಎಂಎಫ್‌ಸಿ)ಶಾಪ್‌ನಲ್ಲಿ ಹಲವು ವೆರೈಟಿ ಚಹಾಗಳು ಲಭ್ಯವಿದೆ. ದಿನನಿತ್ಯ ನೂರಾರು ಮಂದಿ ಗ್ರಾಹಕರು ಬಗೆಬಗೆಯ ಚಹಾಗಳನ್ನು ಸವಿಯಲು ಬರುತ್ತಿದ್ದು, ನೀವು ಒಮ್ಮೆ ಭೇಟಿ ನೀಡಿ ರುಚಿಕರ, ಸ್ವಾದಿಷ್ಟ ಚಹಾವನ್ನು ಸವಿಯಬಹುದು.
ಮಂಗಳೂರು ಫೇವರಿಟ್ ಚಾಯ್ ಶಾಪ್‌ನಲ್ಲಿ ಜಿಂಜರ್, ಮಸಾಲಾ, ಲೆಮನ್, ಬ್ಲಾಕ್ ಟೀಗಳು, ಕಾಫಿ, ಬ್ಲಾಕ್ ಕಾಫಿ, ಬೂಸ್ಟ್, ಹಾರ್ಲಿಕ್ಸ್, ಬಾದಾಮ್ ಮಿಲ್ಕ್ ಸೇರಿದಂತೆ ಹತ್ತು ಹಲವು ಪೇಯಗಳು ಸಿಗುತ್ತದೆ.
45 ವೆರೈಟಿ ಖಾದ್ಯಗಳು: ಎಂಎಫ್‌ಸಿಯಲ್ಲಿ ಚಿಕನ್, ಮಟನ್, ಎಗ್, ವೆಜ್, ಪಂಜಾಬಿ ಹಾಗೂ ಟಿಕ್ಕಾ ಸಮೂಸಗಳು, ಚಟ್ಟಿಪ್ಪತ್ತಿರ್, ಚಿಕನ್ ಕಟ್‌ಲೆಟ್‌ಗಳು, ಮಲಾಯಿ ಕಟ್ ಲೆಟ್, ಕಲ್ತಪ್ಪ, ಪೆಟ್ಟಿ ಪತ್ತಿರ್, ಎರಚ್ಚಿ ಪತ್ತಿರ್, ಉನ್ನೆ ಕಾಯಿ, ಚಿಕನ್ ಹಂಗಾಮ, ಟಿಕ್ಕ ಕಬಾಬ್, ಶಾಯ್ ರೋಲ್, ಕ್ರಿಸ್ಪಿ ವಿಂಗ್ಸ್, ಕ್ರಿಸ್ಪಿ ಲಾಲಿಪೊಪ್ ಹೀಗೆ 45 ಬಗೆಯ ಖಾದ್ಯಗಳು ಇಲ್ಲಿವೆ.
ಮಿಲ್ಕ್ ಶೇಕ್‌ಗಳು: ಮುಹಬ್ಬತ್ ಕಾ ಸರ್‌ಬತ್, ತಂಡರ್ ಕೋಕನೆಟ್, ಅವ್ಗಾಡ್, ಫಲೂದ, ಕಸ್ಟಡ್ ಆ್ಯಪಲ್, ಸ್ಟೋಬೆರ್ರಿ, ಚಾಕೊಲೆಟ್, ವೆನಿಲ್ಲ, ಮ್ಯಾಂಗೊ ಲಸ್ಸಿ, ಚಿಕ್ಕು ಹೀಗೆ ಹಲವು ಬಗೆಯ ಮಿಲ್ಕ್ ಶೇಕ್‌ಗಳು ಗ್ರಾಹಕರಿಗೆ ಲಭ್ಯವಿದೆ.
ಸ್ಟೂಡೆಂಟ್ಸ್, ಉದ್ಯೋಗಿಗಳ ನೆಚ್ಚಿನ ಸ್ಪಾಟ್: ಎಂಎಫ್‌ಸಿ ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ನೆಚ್ಚಿನ ತಾಣ. ಇಲ್ಲಿನ ವಿವಿಧ ಬಗೆಯ ಖಾದ್ಯಗಳು ಮತ್ತು ಚಾಯ್ ಗಳನ್ನು ಸವಿಯಲು ಬೆಳಗ್ಗೆ ಹಾಗೂ ಸಂಜೆ ಕಾಲೇಜು, ಕಚೇರಿಗಳಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಬರುವುದನ್ನು ಕಾಣಬಹುದು. ಸದಾ ಗ್ರಾಹಕರಿಂದ ತುಂಬಿರುವ ಎಂಎಫ್‌ಸಿಯಲ್ಲಿ ಚಾಯ್ ಮತ್ತು ಖಾದ್ಯಗಳ ದರವು ಕೂಡಾ ಕಡಿಮೆ ಇದೆ. ಇದರಿಂದಲೇ ಜನಸಾಮಾನ್ಯರಿಂದ ಹಿಡಿದು ಐಷಾರಾಮಿ ಕಾರುಗಳಲ್ಲಿ ಓಡಾಡುವವರು ಕೂಡಾ ಇಲ್ಲಿನ ಗ್ರಾಹಕರೇ ಆಗಿದ್ದಾರೆ.
''ಎಂಎಫ್‌ಸಿ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಫಳ್ನೀರ್‌ನಲ್ಲಿ ಕಾರ್ಯಾಚರಿಸುತ್ತಿದೆ. ನಮ್ಮಲ್ಲಿಗೆ ಬರುವ ಗ್ರಾಹಕರ ರುಚಿಗೆ ತಕ್ಕಂತೆ ಚಹಾ, ಖಾದ್ಯಗಳನ್ನು ಮಾಡಿಕೊಡುತ್ತಿದ್ದೇವೆ. ಬಹುಶಃ ಇದರಿಂದಲೇ ನಮಗೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಬಹುದು. ಅಲ್ಲದೆ ನ್ಯಾಯಯುತ ಬೆಲೆ ಕೂಡಾ ಮತ್ತೊಂದು ಕಾರಣವೆನ್ನಬಹುದು. ಗುಣಮಟ್ಟ ಮತ್ತು ಗ್ರಾಹಕರ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಎಂಎಫ್‌ಸಿಗೆ ಆರ್ಕಷಿತರಾಗಿದ್ದಾರೆ''.
- ಸಿದ್ದೀಕ್ ಕನ್ಯಾನ, ಮಾಲಕರು, ಎಂಎಫ್‌ಸಿ ಸಂಸ್ಥೆ
''ನಾನು ಎಂಎಫ್‌ಸಿಯ ಡೈಲಿ ಕಸ್ಟಮರ್. ಇಲ್ಲಿ ವಿವಿಧ ಬಗೆಯ ಚಹಾ ಸಿಗುವುದರಿಂದ ಬೋರ್ ಆಗುವುದಿಲ್ಲ. ನಮ್ಮ ಸಂಸ್ಥೆಯಿಂದ ಹೆಚ್ಚಿನ ಉದ್ಯೋಗಿಗಳು ಚಹಾ ಸವಿಯಲು ಎಂಎಫ್‌ಸಿಯನ್ನೇ ನೆಚ್ಚಿಕೊಂಡಿದ್ದಾರೆ. ದಿನಾಲೂ ಇಲ್ಲಿ ಗ್ರಾಹಕರಿಂದ ತುಂಬಿರುತ್ತದೆ.
-ಅರುಣ ಕುಲಶೇಖರ, ಉದ್ಯೋಗಿ, ಎಂಎಫ್‌ಸಿಯ ಗ್ರಾಹಕ