53 ದೇಶಗಳಲ್ಲಿ ಕೋವಿಡ್ ಹೊಸ ಅಲೆ : ಎಚ್ಚರಿಕೆ ಗಂಟೆ ಮೊಳಗಿದ ವಿಶ್ವ ಆರೋಗ್ಯ ಸಂಸ್ಥೆ

Update: 2021-11-05 03:41 GMT
ಫೈಲ್ ಫೋಟೊ

ಡೆನ್ಮಾರ್ಕ್ : ಯೂರೋಪ್ ಮತ್ತು ಕೇಂದ್ರ ಏಷ್ಯಾದ 53 ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹೊಸ ಅಲೆ ವ್ಯಾಪಿಸುವ ಅಪಾಯ ಇದ್ದು, ಇದು ಈ ದೇಶಗಳ ಪಾಲಿಗೆ ನೈಜ ಅಪಾಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಈ ಪೈಕಿ ಕೆಲ ದೇಶಗಳು ಈಗಾಗಲೇ ಹೆಚ್ಚು ಹರಡುವ ಸಾಮರ್ಥ್ಯವಿರುವ ಡೆಲ್ಟಾ ಪ್ರಬೇಧದ ಹೊಸ ಅಲೆಯ ವಿರುದ್ಧ ಹೋರಾಡುತ್ತಿವೆ ಎಂದು ಹೇಳಿದೆ.

"ಸಾಂಕ್ರಾಮಿಕ ದಟ್ಟವಾಗಿ ಹರಡುವ ಇನ್ನೊಂದು ನಿರ್ಣಾಯಕ ಹಂತದಲ್ಲಿ ನಾವಿದ್ದೇವೆ. ಯೂರೋಪ್ ಈಗಾಗಲೇ ಒಂದು ವರ್ಷ ಹಿಂದೆ ಇದ್ದಂತೆ ಸಾಂಕ್ರಾಮಿಕದ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್ ಮುಖ್ಯಸ್ಥ ಹನ್ಸ್ ಕ್ಲೂಗ್ ಹೇಳಿದ್ದಾರೆ.

"ಹೊಸ ಪ್ರಕರಣಗಳು ಮತ್ತು ಬೆಳವಣಿಗೆ ವೇಗ ಮತ್ತೆ ದಾಖಲೆ ಮಟ್ಟ ತಲುಪಲು ಆರಂಭವಾಗಿವೆ. ಪೌರಾತ್ಯ ಪ್ರದೇಶವಾದ ಹಿಂದಿನ ಸೋವಿಯತ್ ಒಕ್ಕೂಟದಿಂದ ಕೇಂದ್ರ ಏಷ್ಯಾವರೆಗಿನ ಪ್ರದೇಶ ತೀರಾ ಕಳವಳಕಾರಿ" ಎಂದು ಅವರು ಬಣ್ಣಿಸಿದ್ದಾರೆ.

ಸಾವು ಮತ್ತು ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೂರೋಪಿಯನ್ ದೇಶಗಳು ಮತ್ತಷ್ಟು ಹರಡುವಿಕೆ ತಡೆಯಲು ಕಠಿಣ ಪರಿಶ್ರಮ ವಹಿಸಬೇಕಿದೆ. ಈ ಹಿಂದಿನ ಪರಿಸ್ಥಿತಿಗೆ ಮತ್ತು ಈಗಕ್ಕೆ ಇರುವ ವ್ಯತ್ಯಾಸವೆಂದರೆ, ಆರೋಗ್ಯ ಅಧಿಕಾರಿಗಳು ಈಗ ವೈರಸ್ ಬಗ್ಗೆ ಮತ್ತು ಅದನ್ನು ನಿಭಾಯಿಸುವ ಸಾಧನಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಕೆಲ ಪ್ರದೇಶಗಳಲ್ಲಿ ತಡೆ ಕ್ರಮಗಳನ್ನು ಸಡಿಲಿಸಿದ್ದು ಮತ್ತು ಲಸಿಕೆ ಪ್ರಮಾಣ ಏರಿಕೆಯ ಮೂಲಕ ಪ್ರಕಟವಾಗಿದೆ" ಎಂದು ಹೇಳಿದ್ದಾರೆ.

ಯೂರೋಪ್ ಪ್ರದೇಶದಲ್ಲಿ ಒಂದು ವಾರದಲ್ಲಿ ಸುಮಾರು 18 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 6ರಷ್ಟು ಏರಿಕೆಯಾಗಿದ್ದು, ಸಾವಿನ ಸಂಖ್ಯೆ 24 ಸಾವಿರ ದಾಟಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 12ರಷ್ಟು ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News