ಕಡಂಬು ಜುಮಾ ಮಸೀದಿ: ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
Update: 2021-11-05 19:52 IST
ವಿಟ್ಲ: ಕಡಂಬು ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಮತ್ತು 2021-22 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ರವಿವಾರ ಮದರಸದ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 2021-22 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಪಿಲಿವಳಚ್ಚಿಲ್ , ಉಪಾಧ್ಯಕ್ಷರಾಗಿಇಸ್ಮಾಯಿಲ್ ಎ.ಬಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಬಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಕುಞ್ಞಿ ಕೆ.ಎಸ್ ಹಾಗೂ ಅಝೀಝ್ ಬಿ.ಕೆ. ಕೋಶಾಧಿಕಾರಿಯಾಗಿ ಇಬ್ರಾಹಿಂ ಬೆದ್ರಕ್ಕಾಡು ಅವರನ್ನು ಆಯ್ಕೆ ಮಾಡಲಾಯಿತು.