×
Ad

ನ.7ರಂದು ಸಮಸ್ತ ಪ್ರಾರ್ಥನಾ ದಿನ

Update: 2021-11-05 20:05 IST

ಮಂಗಳೂರು, ನ.5: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ ಪ್ರತಿವರ್ಷ ಅರಬಿಕ್ ಹಿಜರಿ ವರ್ಷ ರಬೀಉಲ್ ಆಖರ್ ತಿಂಗಳ ಮೊದಲ ರವಿವಾರ ಸಮಸ್ತದ ಮದರಸ ಹಾಗೂ ಮಸೀದಿ ಕೇಂದ್ರವಾಗಿರಿಸಿ ನಡೆಸಿಕೊಂಡು ಬರುತ್ತಿರುವ ಪ್ರಾರ್ಥನಾ ದಿನ ಈ ವರ್ಷ ನ.7ರಂದು ಆಚರಿಸಲಾಗುವುದು ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪ್ರಕಟನೆ ತಿಳಿಸಿದೆ.

ಹತ್ತು ಸಾವಿರಕ್ಕೂ ಮಿಕ್ಕಿದ ಸಮಸ್ತದ ಮದರಸಗಳ ಒಂದು ಲಕ್ಷದಷ್ಟು ಅಧ್ಯಾಪಕರು, ಸುಮಾರು 12 ಲಕ್ಷ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಾರ್ವತ್ರಿಕ ಪ್ರಾರ್ಥನಾ ಸಂಗಮದಲ್ಲಿ ಭಾಗವಹಿಸಲಿದ್ದಾರೆ.

ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ನೇತೃತ್ವ ನೀಡಿ ನಮ್ಮನ್ನಗಲಿದವರು, ಮಸೀದಿ ಮದರಸಗಳ ನಿರ್ಮಾಣಕ್ಕಾಗಿ ದುಡಿದು ಮಡಿದವರು, ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೇತೃತ್ವ ನೀಡಿದವರು ಮೊದಲಾದವರ ಇಹಪರ ವಿಜಯ ಮತ್ತು ಮೋಕ್ಷಕ್ಕಾಗಿ, ರಾಜ್ಯ-ರಾಷ್ಟ್ರಗಳ ಶಾಂತಿ ಸೌಹಾರ್ದತೆಗಳಿಗಾಗಿ ಪ್ರಾರ್ಥಿಸುವುದು ಈ ಪ್ರಾರ್ಥನಾ ದಿನದ ಉದ್ದೇಶವೆಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News