×
Ad

ಬೆಳ್ಮ ಬಡಕಬೈಲ್ ತಾಜುಲ್ ಉಲಮಾ ಮದ್ರಸ ಕಟ್ಟಡ ಉದ್ಘಾಟನೆ

Update: 2021-11-05 20:06 IST

ಮಂಗಳೂರು, ನ.5: ಅನ್ನಜಾತ್ ಎಜ್ಯುಕೇಶನ್ ಟ್ರಸ್ಟ್ ಬೆಳ್ಮ ಬಡಕಬೈಲ್ ಅಧೀನದಲ್ಲಿ ತಾಜುಲ್ ಉಲಮಾ ಮದ್ರಸ ಕಟ್ಟಡ ಉದ್ಘಾಟನೆಗೊಂಡಿತು.

ಮದ್ರಸ ಕಟ್ಟಡವನ್ನು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು. ಅನ್ನಜಾತ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವಿ.ಯು ಇಸ್ಹಾಕ್ ಝುಹ್‌ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಶಾಸಕ ಯು.ಟಿ.ಖಾದರ್, ಬೆಳ್ಮ ಗ್ರಾಪಂ ಅಧ್ಯಕ್ಷ ಬಿ.ಎಂ. ಸತ್ತಾರ್, ಸದಸ್ಯ ಅಬ್ದುರ್ರಝಾಕ್ ಕಾನೆಕೆರೆ, ಮಾಜಿ ಸದಸ್ಯ ಕಬೀರ್ ಡಿ.,ರೆಂಜಾಡಿ ಜುಮಾ ಮಸೀದಿ ಖತೀಬ್ ಅಬ್ದುಲ್ ಖಾದರ್ ಮದನಿ, ಮಾಜಿ ಖತೀಬ್ ಖಾದರ್ ಮುಸ್ಲಿಯಾರ್, ಗಣೇಶ್ ಜಿ. ಗಾವ, ಬೆಳ್ಮಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ.ಎ ಹನೀಫ್, ಎಸ್‌ಜೆಎಂ ದೇರಳಕಟ್ಟೆ ರೇಂಜ್ ಅಝೀಝ್ ಸಅದಿ, ಎಸ್‌ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವ ಹಾಜಿ, ಕಾನೆಕೆರೆ ತಾಜುಲ್ ಉಲಮಾ ಜುಮಾ ಮಸೀದಿ ಅಧ್ಯಕ್ಷ ಎಚ್.ಎಚ್. ಶಫೀಕ್ ಹಾಜಿ, ಸಾಮಾಜಿಕ ಕಾರ್ಯಕರ್ತ ಬಿ.ಆರ್. ಯೂಸುಫ್, ಎಸ್‌ಎಂಎ ದೇರಳಕಟ್ಟೆ ಅಧ್ಯಕ್ಷ ಅಬ್ಬಾಸ್ ಉರುಮಣೆ, ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಪ್ರ.ಕಾರ್ಯದರ್ಶಿ ಆಶಿಕ್ ಕಲ್ಪಾದೆ, ಟ್ರಸ್ಟಿನ ಉಪಾಧ್ಯಕ್ಷ ಮೋನು ಅಲ್-ಮದೀನಾ, ಕೋಶಾಧಿಕಾರಿ ಸಂಶುದ್ದೀನ್, ಟ್ರಸ್ಟ್ ಜೊತೆ ಕಾರ್ಯದರ್ಶಿ ಮುಹಮ್ಮದ್ ಸಾಲಿ, ಟ್ರಸ್ಟಿ ಇಸ್ಮಾಯೀಲ್ ಬಿ. ಉಪಸ್ಥಿತರಿದರು.

ತಾಜುಲ್ ಉಲಮಾ ಮಸೀದಿಯ ಖತೀಬ್ ಮುಹಮ್ಮದ್ ಇಫಾಝ್ ತಮೀಮ್ ಮರ್ಝೂಖಿ ಸ್ವಾಗತಿಸಿದರು. ಕಾರ್ಯದರ್ಶಿ ಸಿದ್ದೀಖ್ ಬಡಕಬೈಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News