×
Ad

ನ.6-7: ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ಟೇಬಲ್ ಟೆನಿಸ್ ಪಂದ್ಯಾಟ

Update: 2021-11-05 20:22 IST

ಮಂಗಳೂರು, ನ.5: ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ಲಬ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ, ಪ್ರಸಿದ್ಧ ಉದ್ಯಮಿಗಳಾದ ಅಲ್‌ ಮುಝೈನ್ ಸಂಸ್ಥೆಯ ಮಾಲಕ ಝಕರಿಯಾ ಬಜ್ಪೆ, ಸವ್ಯಸಾಚಿ ಗ್ರೂಪ್‌ನ ವಿಜಯ್ ಹೆಗ್ಡೆ, ಝಾರಾ ಕನ್ವೆನ್ಷನ್ ಸೆಂಟರ್‌ನ ಝಹೀರ್ ಝಕರಿಯಾ, ಕುಳಾಯಿ ಫೌಂಡೇಶನ್ ಸಂಸ್ಥಾಪಕಿ ಪ್ರತಿಭಾ ಕುಳಾಯಿಯವರ ಪ್ರಾಯೋಜಕತ್ವದಲ್ಲಿ ನ.6 ಮತ್ತು 7ರಂದು ಟೇಬಲ್ ಟೆನಿಸ್ ಪಂದ್ಯಾಟ ಹಳೆಯಂಗಡಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ಅಂತರ್‌ ರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ. ದೇಶ-ವಿದೇಶಗಳ ಪ್ರಸಿದ್ಧ ಉದ್ಯಮಿಗಳ ಹಾಗೂ ಕ್ರೀಡಾ ಪ್ರೋತ್ಸಾಹಕರ 12 ಫ್ರಾಂಚೈಸಿಗಳು ಪ್ರತಿಷ್ಠಿತ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ಟೇಬಲ್ ಟೆನಿಸ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News