ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಳೆಯಂಗಡಿ ವಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
Update: 2021-11-07 12:10 IST
ಮುಲ್ಕಿ, ನ.6: ಮುಸ್ಲಿಂ ಸಂಘಟನೆಗಳ ಒಕ್ಕೂಟ ಇದರ ಹಳೆಯಂಗಡಿ ವಲಯದ 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಬೊಳ್ಳೂರು ರಿಲಯನ್ಸ್ ಭವನದಲ್ಲಿ ನಡೆಯಿತು.
ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಳೆಯಂಗಡಿ ವಲಯದ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕದಿಕೆ ಸರ್ವಾನುಮತದಿಂದ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಮೊಯ್ದಿನ್ ಹಳೆಯಂಗಡಿ, ಉಪಾಧ್ಯಕ್ಷರಾಗಿ ಹಾರಿಸ್ ನವರಂಗ್, ಕಾರ್ಯದರ್ಶಿಯಾಗಿ ಅಝೀಝ್ ಐ.ಎ.ಕೆ., ಕೋಶಾಧಿಕಾರಿಯಾಗಿ ಮಿರ್ಝಾ ಅಹ್ಮದ್ ಸಂತಕಟ್ಟೆ ಆಯ್ಕೆಯಾದರು.
ಸಂಘಟನೆಯ ಸಲಹೆಗಾರರಾಗಿ ಹಳೆಯಂಗಡಿಯ ವಲಯ ವ್ಯಾಪ್ತಿಯ ನಾಲ್ಕು ಮಸೀದಿಗಳ ಜಮಾಅತ್ ಕಮಿಟಿಗಳ ಅಧ್ಯಕ್ಷರನ್ನು ನೇಮಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಮಾಜಿ ಸದಸ್ಯ ಮನ್ಸೂರ್ ಸಾಗ್ ವಹಿಸಿದ್ದರು.
ಇಬ್ರಾಹೀಂ ಬೊಳ್ಳೂರು ದುಆ ನೆರವೇರಿಸಿದರು. ಮೊಯ್ದಿನ್ ಹಳೆಯಂಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.