ಫೆಬ್ರವರಿ 18ರಿಂದ 27ರವರೆಗೆ ಕಾಜೂರು ಮಖಾಂ ಶರೀಫ್ ಉರೂಸ್
Update: 2021-11-07 13:31 IST
ಬೆಳ್ತಂಗಡಿ, ನ.7: ಕಾಜೂರು ಮಖಾಂ ಶರೀಫ್ ನ ಮುಂದಿನ ಸಾಲಿನ ಉರೂಸ್ 2022ರ ಫೆಬ್ರವರಿ 18ರಿಂದ 27ರವರೆಗೆ ನಡೆಯಲಿದೆ ಎಂದು ದರ್ಗಾ ಶರೀಫ್ ಗೌರವಾಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ದಿನಾಂಕ ಘೋಷಿಸಿದ್ದಾರೆ.
ಕಾಜೂರು ಮತ್ತು ಕಿಲ್ಲೂರು ಉಭಯ ಜಮಾಅತ್ ಗಳ ಉರೂಸ್ ಸಮಿತಿ ಸಭೆಯ ಬಳಿಕ ಜಂಟಿ ಸಮಿತಿ ನಿಯೋಗ ಕುಂಬೋಳ್ ತಂಙಳ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ವೇಳೆ ಅವರು ಅಂತಿಮ ದಿನಾಂಕ ನಿಗದಿಗೊಳಿಸಿ ತೀರ್ಮಾನ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಕಾಜೂರು, ಉಪಾಧ್ಯಕ್ಷ ಕೆ.ಮುಹಮ್ಮದ್ ಪುತ್ತುಮೋನು ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಎಂ.ಎಕಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಉರೂಸ್ ಸಮಿತಿಯ ಸದಸ್ಯರಾದ ಎಂ.ಅಬೂಬಕರ್ ಮಲ್ಲಿಗೆಮನೆ ಕಿಲ್ಲೂರು ಮತ್ತು ಬದ್ರುದ್ದೀನ್ ಕಾಜೂರು ಉಪಸ್ಥಿತರಿದ್ದರು.