ಉಡುಪಿ ಬ್ಲಾಕ್ ಕಾಂಗ್ರೆಸ್‌ನಿಂದ ಸರ್ವಧರ್ಮ ದೀಪಾವಳಿ ಆಚರಣೆ
ಉಡುಪಿ, ನ.7: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಉಡುಪಿ ಅಂಜುಮಾನ್ ಮಸೀದಿಯ ಧರ್ಮಗುರು ಮೌಲಾನಾ ಇನಾಯತ್ತುಲ್ಲಾ ರಿಝ್ವಿ ಹಾಗೂ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಸಂದೇಶ ನೀಡಿದರು.
ರಂಗೋಲಿ ಕಲಾವಿದ ಮಹೇಶ್ ರಾವ್, ರಂಗೋಲಿ ಬಾಲ ಕಲಾವಿದೆ ಅವ್ಯ ಎಂ.ಕಾಂಚನ್ ಮತ್ತು ಸಾಂಪ್ರದಾಯಿಕ ಗೂಡುದೀಪ ತಯಾರಿಸುವ ಕಡೆಕಾರಿನ ಸುಪ್ರಿೀತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಪುತ್ರನ್, ಮುರಳಿ ಶೆಟ್ಟಿ, ಹರೀಶ್ ಕಿಣಿ, ಕುಶಲ್ ಶೆಟ್ಟಿ, ಅಮೃತ್ ಶೆಣೈ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಗಣೇಶ್ ದೇವಾಡಿಗ, ನವೀನ್ ಶೆಟ್ಟಿ, ಸರಸ್ವತಿ ಕಡೆಕಾರು, ಜಯ ಶೇರಿಗಾರ್ ಕನ್ನರ್ಪಾಡಿ, ಆಶಾ ಚಂದ್ರಶೇಖರ್, ನಾಗೇಶ್ ಉದ್ಯಾವರ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅನೂಪ್ ದೇವಾಡಿಗ, ಲಕ್ಷ್ಮಣ್ ಪೂಜಾರಿ, ನಾರಾಯಣ್ ಕುಂದರ್, ರಮೇಶ್ ಮಲ್ಪೆ, ಸಾಯಿರಾಜ್, ಸಂಜಯ್ ಆಚಾರ್ಯ, ಡಿಯೋನ್ ಡಿಸೋಜ, ಹಮ್ಮಾದ್, ಲಕ್ಷ್ಮೀಶ್ ಶೆಟ್ಟಿ, ವಿವೇಕ್, ಶಬರೀಶ್ ಸುವರ್ಣ, ಸಾಧನಾ ಮಲ್ಯ, ಭೂಮಿಕಾ, ಜಯಶ್ರೀ ಶೇಟ್, ಪ್ರಮಿಳಾ ಜತ್ತನ್ನ, ಮ್ಯಾಕ್ಸಿಮ್ ಡಿಸೋಜ, ಜ್ಯನೆಟ್ ಡಿಸಿಲ್ವಾ, ವಿಲ್ಮಾ ವೆನಿಶಿಯ, ಪ್ರೀತಿ ಸಾಲಿನ್ಸ್, ರೋಜಾ, ರೋಶ್ನಿ, ತಸ್ನೀನ್, ಸುದೇಶ್ ಶೇಟ್, ಸುರೇಂದ್ರ ಆಚಾರ್ಯ, ಶೋಭಾ ಸುರೇಂದ್ರ, ಸವಿತಾ ಶೆಣೈ, ಸತೀಶ್ ಕೊಡವೂರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸ್ವಾಗತಿಸಿದರು. ಸತೀಶ್ ಕುಮಾರ್ ಮಂಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಭವನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ, ಗೂಡು ದೀಪ ಕಟ್ಟಿ, ರಂಗೋಲಿ ಹಾಕಿ, ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸ ಲಾಯಿತು.