×
Ad

ಆಸ್ಟ್ರೊ ಮೋಹನ್‌ಗೆ ಅಮೆರಿಕದ ಫೊಟೋಗ್ರಾಫಿಕ್ ಸೊಸೈಟಿ ವಿಶೇಷ ಗೌರವ

Update: 2021-11-07 18:41 IST

ಉಡುಪಿ, ನ.7: ಛಾಯಾಚಿತ್ರ ಕಲಾ ಶಿಕ್ಷಣದ ಅಭಿವೃದ್ಧಿ ಹಾಗೂ ಸಂಘಟನೆಗೆ ನಡೆಸಿದ ಅವಿರತ ಶ್ರಮ ಮತ್ತು ಕೊಡುಗೆಯನ್ನು ಗುರುತಿಸಿ ಅಮೆರಿಕದ ಫೊಟೋ ಗ್ರಾಫಿಕ್ ಸೊಸೈಟಿಯು ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಅಸೋಸಿಯೇಟ್ ಪದವಿ ನೀಡಿ ಗೌರವಿಸಿದೆ.

ಈ ಕುರಿತು ಅಮೆರಿಕದ ಫೋಟೋಗ್ರಾಫಿ ಸೊಸೈಟಿಯ ನವೆಂಬರ್ 2021 ಮ್ಯಾಗಜಿನ್ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಸುಮಾರು 27 ವರ್ಷಗಳ ಸುಧೀರ್ಘ ಅನುಭವ ಹೊಂದಿರುವ ಆಸ್ಟ್ರೊ, ಕಳೆದ 25 ವರ್ಷಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಛಾಯಾಚಿತ್ರ ಪ್ರಪಂಚದಲ್ಲಿ 188 ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು 500ಕ್ಕೂ ಅಧಿಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News