×
Ad

ರಾಜ್ಯೋತ್ಸವ ಪುರಸ್ಕೃತ ಬನ್ನಂಜೆ ಬಾಬು ಅಮೀನ್‌ಗೆ ಅಭಿನಂದನೆ

Update: 2021-11-07 19:39 IST

ಉಡುಪಿ, ನ.7: ಉಡುಪಿ ತುಳುಕೂಟದ ವತಿಯಿಂದ ರವಿವಾರ ಬಡಗು ಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆ ಯಲ್ಲಿ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರನ್ನು ಅಭಿನಂದಿಸಲಾಯಿತು.

ಅದೇ ರೀತಿ ಸಂಘದ ಸದಸ್ಯರಾಗಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಮಹಾಬಲ ಶೆಟ್ಟಿ, ಸುಭಾಷ್‌ಚಂದ್ರ ವಾಗ್ಳೆ, ಗೋಪಾಲ ಸಿ.ಬಂಗೇರ ಹಾಗೂ ಕರಾವಳಿ ಇ ಧ್ವನಿ ಡಿಜಿಟಲ್ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಜನಾರ್ದನ ಕೊಡವೂರು ಅವರನ್ನು ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬನ್ನಂಜೆ ಬಾಬು ಅಮೀನ್ ಮಾತನಾಡಿ, ನನಗೆ ದೊರೆತ ಈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಇಡೀ ತುಳುನಾಡಿಗೆ ಸಂದ ಗೌರವ ಆಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷ ರಾದ ಮನೋರಮಾ ಶೆಟ್ಟಿ, ಸದಾಶಿವ ಭಟ್, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು. ಮುಹಮ್ಮದ್ ವೌಲಾ ಸ್ವಾಗತಿಸಿದರು. ರತ್ನಾಕರ ಇಂದ್ರಾಳಿ ಹಾಗೂ ಪ್ರಭಾಕರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News