×
Ad

ಉಳ್ಳಾಲ ಉರೂಸ್ ಕಾರ್ಯಕ್ರಮದ ಪ್ರಚಾರದ ಉದ್ಘಾಟನಾ ಸಮಾರಂಭ

Update: 2021-11-07 21:01 IST

ಉಳ್ಳಾಲ, ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಇದರ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದ ಪ್ರಚಾರದ ಉದ್ಘಾಟನಾ ಸಮಾರಂಭ ರವಿವಾರ ನಡೆಯಿತು.

ಅಸಯ್ಯದ್ ಜುಮಲ್ಲೈಲಿ ತಂಙಳ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ತಾಜುಲ್ ಉಲಮಾ ಅವರ ಆಶಯ ಅನುಸರಿಸಿ ಕೊಂಡು ಕಾರ್ಯ ನಿರ್ವಹಣೆ ಮಾಡಬೇಕು. ಮದನಿ ತಂಙಳ್ ರವರ ಉಪದೇಶ ಕೂಡ  ಜೀವನದಲ್ಲಿ ಅನುಕರಣೆ ಮಾಡಿ ಐಕ್ಯತೆಯ ಬದುಕು ಮಾಡಬೇಕು ಎಂದು ಕರೆ ನೀಡಿದರು.

ಅಬ್ದುಲ್ ರಶೀದ್ ಝೈನಿ ಮಾತನಾಡಿ, ಜಗತ್ತನ್ನೇ ಜಯಿಸುವ ಶಕ್ತಿ ನಮ್ಮಲ್ಲಿರಬೇಕು. ಬಿಕ್ಕಟ್ಟು ಏನಿದ್ದರೂ ಅದನ್ನು ಬಿಟ್ಟು ಐಕ್ಯತೆ ಯಿಂದ ಇದ್ದುಕೊಂಡು ಉರೂಸ್ ಕಾರ್ಯಕ್ರಮ ನಡೆಸಬೇಕು ಎಂದರು. ಎಸ್ ಬಿ ದಾರಿಮಿ ಮಾತನಾಡಿ ಸೌಹಾರ್ದತೆ ಬಗ್ಗೆ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಖಾದರ್, ಬಿಎಂ ಫಾರೂಕ್ ಉಳ್ಳಾಲ ಉರೂಸ್ ನ ಪೋಸ್ಟರ್ ಬಿಡುಗಡೆ ಮಾಡಿದರು.

ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಇಬ್ರಾಹಿಂ ಬಾಖವಿ‌ ಕೆ.ಸಿ.ರೋಡು ದುವಾ ನೆರವೇರಿಸಿದರು. ಶಾಸಕ ಯು.ಟಿ.ಖಾದರ್, ವಿದಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಸಯ್ಯದ್ ಮದನಿ ಅರೆಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರು, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ವರ್ ಅಲಿ ದಾರಿಮಿ, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಮುದರ್ರಿಸ್ ಇಬ್ರಾಹೀಮ್ ಮದನಿ,  ಎಸ್.ಬಿ.ದಾರಿಮಿ, ಅಝೀಝ್ ದಾರಿಮಿ ಕಲ್ಲೇಗ, ಅಬ್ದುಲ್ ರಶೀದ್ ಝೈನ್ ಕಾಮಿಲ್ ಸಖಾಫಿ,  ಅನೀಸ್ ಕೌಸರಿ, ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ಖಾದರ್ ದಾರಿಮಿ, ಇಬ್ರಾಹೀನ್ ಅಹ್ಸನಿ, ಮುನೀರ್ ಸಖಾಫಿ, ಖಾದರ್ ಕುಲಾಯಿ, ಅಡ್ವಕೇಟ್ ಸುಲೈಮಾನ್, ಮೇಯರ್ ಅಶ್ರಫ್,  ನಗರಸಭೆ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ, ದರ್ಗಾ ಉಪಾಧ್ಯಕ್ಷರಾದ ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮೊಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಉರೂಸ್ ಪ್ರಚಾರ ಸಮಿತಿ ಮತ್ತು ಉರೂಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಉರೂಸ್ ಮೇಲ್ವಿಚಾರಣಾ ಸಮಿತಿ ಸದಸ್ಯ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು. ವಿದ್ಯಾರ್ಥಿ ಅರ್ಫಾಝ್ ಕಿರಾಅತ್ ಪಠಿಸಿದರು. ಉರೂಸ್ ಪ್ರಚಾರ ಸಮಿತಿ ಕನ್ವೀನರ್ ಆಸಿಫ್ ಅಬ್ದುಲ್ಲಾ ವಂದಿಸಿದರು. ಸಲಾಂ ಮದನಿ ಹಾಗೂ ಉರೂಸ್ ಪ್ರಚಾರ ಸಮಿತಿ ಕನ್ವೀನರ್ ಎ.ಕೆ.ಮೊಯಿದ್ದೀನ್ ಹಾಜಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News