ಕ್ಯಾಂಪಸ್ ಫ್ರಂಟ್ ಡೇ ಅಂಗವಾಗಿ ದ.ಕ. ಜಿಲ್ಲಾದ್ಯಂತ ಧ್ವಜಾರೋಹಣ ಕಾರ್ಯಕ್ರಮ

Update: 2021-11-07 15:36 GMT

ಮಂಗಳೂರು, ನ.7: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲಾದ್ಯಂತ ಪುತ್ತೂರು, ಬೆಳ್ತಂಗಡಿ,ಕಡಬ, ಸುಳ್ಯ, ವಿಟ್ಲ, ಬಂಟ್ವಾಳ, ಮಂಗಳೂರು ತಾಲೂಕಿನ ಸುಮಾರು 60 ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮವನ್ನುದ್ದೇಶಿಸಿ ಸಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಸ್ವದಕತ್ ಮಾತನಾಡಿದರು.

ಈ ಸಂದರ್ಭ ಸಿಎಫ್‌ಐ ರಾಜ್ಯ ಉಪಾಧ್ಯಕ್ಷ ರೋಶನ್ ತುಮಕೂರು, ಕಾರ್ಯದರ್ಶಿಗಳಾದ ಸಾಧಿಕ್, ಅಲ್ತಾಫ್, ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ರಾಜ್ಯ ಸಮಿತಿ ಸದಸ್ಯರಾದ ಫಹದ್, ಸಿರಾಜ್, ಮಸೂದ್, ಚಾಂದ್ ,ಝುಬೇರ್, ಜಿಲ್ಲಾ ಮಖಂಡರಾದ ತಾಜುದ್ದೀನ್, ಶಂಸು ವಿಟ್ಲ, ಶರ್ಫುದ್ದೀನ್, ಹಫೀಝ್, ಅಶ್ರಫ್, ಸರ್ಫರಾಝ್ , ಫಯಾಝ್ ,ಅಶ್ಫಾಕ್, ಐಮಾನ್, ಅನ್ಸಾರ್, ಮುಸ್ತಫ, ಯಾಸೀನ್ ಹಾಗೂ ರಿಝ್ವಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News