ಮಂಗಳೂರು: ನ.8ರಂದು ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಹೊಸ ಮಳಿಗೆ ಶುಭಾರಂಭ

Update: 2021-11-07 16:19 GMT

ಮಂಗಳೂರು, ನ.7: ನಗರದ ಲೇಡಿಹಿಲ್‌ನಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ವಿಶಾಲವಾದ ಹೊಸ ಮಳಿಗೆ ನ.8ರಂದು ಶುಭಾರಂಭಗೊಳ್ಳಲಿದೆ.

ಅಂದು ಬೆಳಗ್ಗೆ 10:30ಕ್ಕೆ ನಡೆಯುವ ಸಮಾರಂಭದಲ್ಲಿ ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶೋರೂಂ ಉದ್ಘಾಟಿಸಲಿದ್ದಾರೆ.

ಚಿನ್ನಾಭರಣ ವಿಭಾಗವನ್ನು ತರಂಗ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, ವಜ್ರಾಭರಣ ವಿಭಾಗವನ್ನು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ, ಬೆಳ್ಳಿಯ ಆಭರಣ ವಿಭಾಗವನ್ನು ಶ್ರೀ ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ.ಭೀಮೇಶ್ವರ ಜೋಶಿ ಮತ್ತು ಜಿ.ರಾಜಲಕ್ಷ್ಮೀ ಜೋಶಿ ಹಾಗೂ ಸ್ಮರಣಿಕೆಗಳ ವಿಭಾಗವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು.

ನಾಮಫಲಕವನ್ನು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್., ಸಂಸ್ಥೆಯ ಭಾವಚಿತ್ರವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಹಾಗೂ ಶ್ರೀ ಸೋದೆ ಸ್ವಾಮೀಜಿಯವರ ಭಾವಚಿತ್ರವನ್ನು ಸಂಸ್ಥೆಯ ಎಂ.ರವೀಂದ್ರ ಶೇಟ್ ಮತ್ತು ಕುಟುಂಬದವರು ಅನಾವರಣ ಮಾಡಲಿದ್ದಾರೆ.

ಮೇಯರ್ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ ಮತ್ತು ಕೋಮಲ್ಸ್ ಗ್ರೂಪ್‌ನ ಗಣೇಶ್ ನಾಗ್ವೇಕರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ಶಾಖಾ ಮಳಿಗೆ ಇದಾಗಿದ್ದು, ಮೊದಲ ಮಳಿಗೆ ಬಳಿಯಲ್ಲೇ ನೂತನ ಮಳಿಗೆಯನ್ನು ನಿರ್ಮಿಸಲಾಗಿದೆ. ನೂತನ ಮಳಿಗೆಯು ಪಾರ್ಕಿಂಗ್ ಸೌಲಭ್ಯ ಸಹಿತ 15 ಸಾವಿರ ಚದರಡಿ ವಿಸ್ತೀರ್ಣ ಹೊಂದಿದೆ. 916 ಚಿನ್ನಾಭರಣ, ವಜ್ರಾಭರಣಗಳು, ಅಮೂಲ್ಯ ಸ್ಟೋನ್‌ಗಳು, ಪ್ಲಾಟಿನಂ, ನವರತ್ನ ಸ್ಟೋನ್‌ಗಳು, ಬೆಳ್ಳಿಯ ಆಭರಣಗಳು ಹಾಗೂ ಇತರ ವಸ್ತುಗಳ ಸಂಗ್ರಹ ಈ ಮಳಿಗೆಯಲ್ಲಿ ಇರಲಿದೆ. ಗಿಫ್ಟ್ ಆರ್ಟಿಕಲ್‌ಗಳಿಗಾಗಿ ಪ್ರತ್ಯೇಕ ಕೌಂಟರ್ ಇದೆ. ಸಾಂಪ್ರದಾಯಿಕ ಚಿನ್ನಾಭರಣಗಳ ಜೊತೆಗೆ ಹೊಸ ಜನಾಂಗಕ್ಕೆ ಬೇಕಾದ ಹೊಸ ಆಭರಣಗಳ ಸಂಗ್ರಹವಿದೆ.

ಉದ್ಘಾಟನಾ ಕೊಡುಗೆ

ಎಸ್.ಎಲ್.ಶೇಟ್ ಸಂಸ್ಥೆಯು ಗ್ರಾಹಕರಿಗೆ ಉದ್ಘಾಟನಾ ಕೊಡುಗೆ ಪ್ರಕಟಿಸಿದ್ದು, 1ಗ್ರಾಂ ಚಿನ್ನ ಖರೀದಿಗೆ 1ಗ್ರಾಂ ಬೆಳ್ಳಿ ಉಚಿತ ಹಾಗೂ 1 ಗ್ರಾಂ ಚಿನ್ನಕ್ಕೆ 150ರೂ.ವರೆಗೆ ರಿಯಾಯಿತಿ ಇದೆ. 1 ಕ್ಯಾರೆಟ್ ವಜ್ರಾಭರಣಕ್ಕೆ 7,000 ರೂ.ವರೆಗೆ ಡಿಸ್ಕೌಂಟ್, ಬೆಳ್ಳಿಯ ಆಭರಣಗಳಿಗೆ ಶೇ.10 ಡಿಸ್ಕೌಂಟ್, ಬೆಳ್ಳಿಯ ಆರ್ಟಿಕಲ್‌ಗಳಿಗೆ ಶೇ.5 ಡಿಸ್ಕೌಂಟ್, ಗಿಫ್ಟ್ ಐಟಂಗಳಿಗೆ ಶೇ.5 ಡಿಸ್ಕೌಂಟ್ ನೀಡಲಾಗುವುದು ಹಾಗೂ ಈ ಆಫರ್ ನ.16ರವರೆಗೆ ಚಾಲ್ತಿಯಲ್ಲಿರುತ್ತದೆ.

ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್‌ನಿಂದ ಶೇ.5ರಷ್ಟು ವಿನಾಯಿತಿ ಸಿಗಲಿದೆ ಎಂದು ಸಂಸ್ಥೆಯ ಪಾಲುದಾರರಾದ ಎಂ.ರವೀಂದ್ರ ಶೇಟ್, ಶರತ್ ಶೇಟ್, ಸುಮಂತ್ ಶೇಟ್, ಪ್ರಸಾದ್ ಶೇಟ್ ಹಾಗೂ ಪ್ರಸನ್ನ ಶೇಟ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News