×
Ad

ಕೋಸ್ಟಲ್ ಕೌಂಟಿ ಕ್ಲಬ್ ಕ್ರಿಕೆಟ್ ತಂಡದ ಜೆರ್ಸಿ ಅನಾವರಣ

Update: 2021-11-08 10:56 IST

ಮಂಗಳೂರು, ನ.8: ಎಂ.ಎಸ್. ಸ್ಪೋರ್ಟ್ಸ್ ವೇರ್ ಹಾಗೂ ಬಾವ ಅರ್ಥ್ ಮೂವರ್ಸ್ ಪ್ರಾಯೋಜಕತ್ವ ಹೊಂದಿರುವ ಕೋಸ್ಟಲ್ ಕೌಂಟಿ ಕ್ಲಬ್ ಕ್ರಿಕೆಟ್ ತಂಡದ ನೂತನ ಸಮವಸ್ತ್ರ (ಜೆರ್ಸಿ)ವನ್ನು ಇತ್ತೀಚೆಗೆ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಔಫಾಝ್ ಕೃಷ್ಣಾಪುರ ಜೆರ್ಸಿಯನ್ನು ಅನಾವರಣಗೊಳಿಸಿದರು.

ಇಮ್ರಾನ್ ಕೆ.ಎಫ್.ಸಿ., ನೌಷಾರ್, ಎಂ.ಎಸ್.ಶರೀಫ್, ಶಾರ್ವಾನ, ಅಸೀಲ್, ನೌಫಲ್ ಹಾಗೂ ಅಝೀಮ್ ಬೆಂಗಳೂರು ಉಪಸ್ಥಿತರಿದ್ದರು.

ರಕ್ತದಾನದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜೆರ್ಸಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಲೋಗೊ ಅವಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News