ಬೇಕಲ: ಪೈಂಟಿಂಗ್ ಮಾಡುತ್ತಿದ್ದ ಕಾರ್ಮಿಕ ಮನೆ ಮೇಲಿನಿಂದ ಬಿದ್ದು ಮೃತ್ಯು
Update: 2021-11-08 12:50 IST
ಕಾಸರಗೋಡು, ನ.8: ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮನೆ ಮೇಲಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ರವಿವಾರ ಸಂಜೆ ಮೇಲ್ಪರಂಬ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೇಲ್ಪರಂಬ ಕೈನೋತ್ ನಿವಾಸಿ ಭಾಸ್ಕರ (56) ಮೃತಪಟ್ಟವರು. ಮೇಲ್ಪರಂಬ ದೇಳಿಯ ಮನೆಯೊಂದರಲ್ಲಿ ಪೈಂಟಿಂಗ್ ಮಾಡುತ್ತಿದ್ದ ವೇಳೆ ಇವರು ಆಕಸ್ಮಿಕವಾಗಿ ಕೆಳಗೆಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಅವರು ಕೊನೆಯುಸಿರೆಳೆದರೆನ್ನಲಾಗಿದೆ.
ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.