×
Ad

ಹಾಜಬ್ಬರಿಗೆ ಪದ್ಮಶ್ರೀ ಪ್ರದಾನ: ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಂಡ ಹಾಜಬ್ಬರ ಶಾಲಾ ವಿದ್ಯಾರ್ಥಿಗಳು

Update: 2021-11-08 14:24 IST

ಕೊಣಾಜೆ, ನ.8: ದಿಲ್ಲಿಯಲ್ಲಿಂದು ರಾಷ್ಟ್ರಪತಿ ಭವನದಲ್ಲಿ ಹರೇಕಳ ಹಾಜಬ್ಬಯವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಸ್ವೀಕರಿಸುತ್ತಿರುವ ಅಮೂಲ್ಯ ಕ್ಷಣಗಳನ್ನು ಹಾಜಬ್ಬರ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಅಳವಡಿಸಲಾಗಿದ್ದ ಪರದೆಯ ಮೂಲಕ ವೀಕ್ಷಿಸಿ ಕಣ್ತುಂಬಿಕೊಂಡರು.

   ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಾಲೆಯನ್ನು ನಿರ್ಮಿಸಿ ಅಕ್ಷರ ಕ್ರಾಂತಿ ಮೊಳಗಿಸಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಘೋಷಣೆಯಾಗಿದ್ದಾಗಲೇ ಇಡೀ ಊರೇ ಸಂಭ್ರಮಿಸಿತ್ತು. ಈ ಸಂಭ್ರಮಕ್ಕೆ ಮಿಗಿಲಾಗಿ ಹಾಜಬ್ಬರ ಶಾಲೆಯ ವಿದ್ಯಾರ್ಥಿಗಳು ಸಂತಸಪಟ್ಟಿದ್ದರು. ಇದರ ನಡುವೆ ರಾಷ್ಟ್ರಪತಿಯವರಿಂದ ಅತ್ಯುನ್ನತ ಗೌರವದ  ಪದ್ಮಶ್ರೀ ಸ್ವೀಕರಿಸುವ ಸಂಭ್ರಮವನ್ನು ವೀಕ್ಷಿಸಲು ಶಿಕ್ಷಕಿಯರು ಶಾಲೆಯಲ್ಲಿ ಸ್ಕ್ರೀನ್ ಅಳವಡಿಸಿ ವ್ಯವಸ್ಥೆ ಮಾಡಿದ್ದರು.

ತಮ್ಮದೇ ಶಾಲೆಯ ನಿರ್ಮಾತೃ ಹಾಜಬ್ಬರ  ಪ್ರಶಸ್ತಿ ಸ್ವೀಕರಿಸುವ ಅಮೂಲ್ಯ ಕ್ಷಣಗಳನ್ನು ಪರದೆಯಲ್ಲಿ ವೀಕ್ಷಿಸಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು ಹಾಗೂ ಪರಸ್ಪರ ಸಂತೋಷವನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News