×
Ad

ಮಣಿಪಾಲ: ನ.9ರಂದು ಹವಾಮಾನ ತಜ್ಞರೊಂದಿಗೆ ಸಂವಾದ

Update: 2021-11-08 18:30 IST

ಉಡುಪಿ, ನ.8: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಆಶ್ರಯದಲ್ಲಿ ಅಮೆರಿಕದ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್‌ನ ಹವಾಮಾನ ತಜ್ಞ ಡಾ. ರಘು ಮುರ್ತುಗುಡ್ಡೆ ಅವರೊಂದಿಗೆ ವಿದ್ವತ್ಪೂರ್ಣ ಸಂವಾದ ಕಾರ್ಯಕ್ರಮ ನ.9ರ ಸಂಜೆ 4 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮವು ಮೈಕ್ರೋಸಾಫ್ಟ್ ಟೀಮ್ಸ್(ಆನ್‌ಲೈನ್)ನಲ್ಲಿ ನಡೆಯಲಿದೆ. ಈ ಸಂವಾದ ಕಾರ್ಯಕ್ರಮ ಜಿಸಿಪಿಎಸ್ ವಿದ್ಯಾರ್ಥಿಗಳು ಸುಸ್ಥಿರ ಜೀವನ ಕ್ರಮದ ಕುರಿತು ಆರಂಭಿಸಿರುವ ‘ಎಕೋಸ್ಪಾಟ್’ ಅಭಿಯಾನದ ಭಾಗವಾಗಿದೆ. ಆಸಕ್ತರು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News