×
Ad

ಮಂಗಳೂರು: ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ನೂತನ ಮಳಿಗೆ ಉದ್ಘಾಟನೆ

Update: 2021-11-08 18:56 IST

ಮಂಗಳೂರು, ನ. 8: ನಗರದ ಲೇಡಿಹಿಲ್‌ನಲ್ಲಿ ಎಸ್. ಎಲ್. ಶೇಟ್ ಡೈಮಂಡ್ ಹೌಸ್‌ನ ವಿಶಾಲವಾದ ನೂತನ ಮಳಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಡಿ. ಹರ್ಷೇಂದ್ರ ಕುಮಾರ್, ಸ್ವರ್ಣಾಭರಣಗಳ ವ್ಯವಹಾರದಲ್ಲಿ ಏಳುವರೆ ದಶಕಗಳ ಅನುಭವವಿರುವ ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಮಂಗಳೂರು ಮಾತ್ರವಲ್ಲದೆ ರಾಜ್ಯ ಮತ್ತು ದೇಶದಲ್ಲಿಯೇ ಮನೆ ಮಾತಾಗಿದೆ. ಈ ಸಂಸ್ಥೆಯು ಇನ್ನಷ್ಟು ಮಳಿಗೆಗಳನ್ನು ತೆರೆದು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ನೂತನ ಮಳಿಗೆಯ ನಾಮ ಫಲಕವನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ಅನಾವರಣ ಮಾಡಿದರು.

ಚಿನ್ನಾಭರಣ ವಿಭಾಗವನ್ನು ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ ಅವರು, ವಜ್ರಾಭರಣ ವಿಭಾಗವನ್ನು ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ.ಜೆ. ಶೆಟ್ಟಿ, ಬೆಳ್ಳಿಯ ಆಭರಣ ವಿಭಾಗವನ್ನು ಶ್ರೀ ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಶಿ ಮತ್ತು ಜಿ. ರಾಜಲಕ್ಷ್ಮೀ ಜೋಶಿ ಅವರು ಹಾಗೂ ಸ್ಮರಣಿಕೆಗಳ ವಿಭಾಗವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸಂಸ್ಥೆಯ ಸ್ಥಾಪಕರ ಭಾವಚಿತ್ರವನ್ನು ಹಾಗೂ ಶ್ರೀ ಸೋದೆ ಸ್ವಾಮೀಜಿ ಅವರ ಭಾವಚಿತ್ರವನ್ನು ಸಂಸ್ಥೆಯ ಎಂ. ರವೀಂದ್ರ ಶೇಟ್ ಮತ್ತು ಕುಟುಂಬದವರು ಅನಾವರಣ ಮಾಡಿದರು.

ಕರ್ಣಾಟಕ ಬ್ಯಾಂಕಿಗೂ ಎಸ್.ಎಲ್. ಶೇಟ್ ಸಂಸ್ಥೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದ ಮಹಾಬಲೇಶ್ವರ ಎಂ.ಎಸ್. ಅವರು, 1973- 74 ರಿಂದ ಸಂಸ್ಥೆಯು ಕರ್ಣಾಟಕ ಬ್ಯಾಂಕ್ ಜತೆ ವ್ಯವಹಾರ ಸಂಬಂಧವನ್ನು ಇರಿಸಿಕೊಂಡಿದೆ. ಬ್ಯಾಂಕಿನಲ್ಲಿಯೂ ಶೇಟ್ ಕುಟುಂಬದವರಿಗೆ ವಿಶೇಷ ಗೌರವದ ಸ್ಥಾನವಿದೆ ಎಂದು ಹೇಳಿ, ಶುಭ ಕೋರಿದರು.

ಸ್ವರ್ಣಾಭರಣ ವ್ಯವಹಾರದಲ್ಲಿ ಹಲವು ವರ್ಷಗಳ ಪರಂಪರೆಯನ್ನು ಹೊಂದಿರುವ ಎಸ್.ಎಲ್. ಶೇಟ್ ಸಂಸ್ಥೆಯು ನಗುಮುಖದ ಸೇವೆಗೆ ಹೆಸರಾಗಿದ್ದು, ಅದು ಇನ್ನಷ್ಟು ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ಹೊಸ ಹೊಸ ವಿನ್ಯಾಸದ ಚಿನ್ನಾಭರಣಗಳನ್ನು ಒದಗಿಸಲಿ ಹಾಗೂ ಉದ್ಯೋಗ ಸೃಷ್ಟಿಸಲಿ ಎಂದು ಎ.ಜೆ. ಶೆಟ್ಟಿ ಆಶಿಸಿದರು.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ಉಪಸ್ಥಿತರಿದ್ದು, ಶುಭ ಕೋರಿದರು.

ಅಧ್ಯಕ್ಷತೆಯನ್ನು ಮೇಯರ್ ಪ್ರೇಮಾನಂದ ಶೆಟ್ಟಿ ವಹಿಸಿದ್ದರು. ಸ್ಥಳೀಯ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ ಮತ್ತು ಕೋಮಲ್ಸ್ ಗ್ರೂಪ್‌ನ ಗಣೇಶ್ ನಾಗ್ವೇಕರ್ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.

ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಮುಖ್ಯಸ್ಥರಾದ ಎಂ. ರವೀಂದ್ರ ಶೇಟ್ ಸ್ವಾಗತಿಸಿದರು. ಪಾಲುದಾರರಾದ ಶರತ್ ಶೇಟ್, ಸುಮಂತ್ ಶೇಟ್, ಪ್ರಸಾದ್ ಶೇಟ್, ಪ್ರಸನ್ನ ಶೇಟ್ ಮತ್ತು ಕಾಂಚನ ಶೇಟ್, ದೀಪ್ತಿ ಶೇಟ್, ಶಿವಾನಿ ಶೇಟ್, ವಿರಾಜ್ ಶೇಟ್ ಅವರು ಉಪಸ್ಥಿತರಿದ್ದರು. ದೀಪ್ತಿ ಶರತ್ ಶೇಟ್ ವಂದಿಸಿದರು. ಸುಧಾಕರ ರಾವ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು

ಹೊಸ ಮಳಿಗೆ ಉದ್ಘಾಟನೆ: ಗ್ರಾಹಕರಿಗೆ ವಿಶೇಷ ಕೊಡುಗೆ

1947ರಲ್ಲಿ ಸ್ಥಾಪನೆಯಾದ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಚಿನ್ನಾಭರಣಗಳು ಸುಂದರ , ಆಕರ್ಷಕ ವಿನ್ಯಾಸ ಮತ್ತು ಕಸೂತಿ ಕೌಶಲ್ಯಕ್ಕೆ ಹೆಸರಾಗಿದ್ದು, ಕರಾವಳಿಯಲ್ಲಿ ಮಾತ್ರವಲ್ಲ ನೆರೆಹೊರೆಯ ಜಿಲ್ಲೆಯವರಿಗೂ ಚಿರಪರಿಚಿತವಾಗಿವೆ.

ಹೊಸ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ರಿಯಾಯಿತಿ ಮತ್ತು ದರ ಕಡಿತದ ವಿಶೇಷ ಕೊಡುಗೆಯನ್ನು ಸಂಸ್ಥೆಯು ಪ್ರಕಟಿಸಿದೆ. 1 ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ ಹಾಗೂ 1 ಗ್ರಾಂ ಚಿನ್ನಕ್ಕೆ 150 ರೂ. ತನಕ ರಿಯಾಯಿತಿ, 1 ಕ್ಯಾರೆಟ್ ವಜ್ರಾಭರಣಕ್ಕೆ 7000 ರೂ. ತನಕ ಡಿಸ್ಕೌಂಟ್, ಬೆಳ್ಳಿಯ ಆಭರಣಗಳಿಗೆ ಶೇ. 10 ಡಿಸ್ಕೌಂಟ್, ಬೆಳ್ಳಿಯ ಆರ್ಟಿಕಲ್‌ಗಳಿಗೆ ಶೇ. 5 ಡಿಸ್ಕೌಂಟ್, ಗಿಫ್ಟ್ ಐಟಂಗಳಿಗೆ ಶೇ. 5 ಡಿಸ್ಕೌಂಟ್ ನ. 16 ರ ತನಕ ಇರುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News