ನ.11ರಂದು ‘ತುಳು ಅಪ್ಪೆ’ ಭಾವಚಿತ್ರ ಅನಾವರಣ
ಉಡುಪಿ, ನ.8: ಕೊಡಂಕೂರು ಹಿತರಕ್ಷಣಾ ವೇದಿಕೆ ಹಾಗೂ ಶ್ರೀಸಾಯಿ ಬಾಬಾ ಮಂದಿರದ ಜಂಟಿ ಆಶ್ರಯದಲ್ಲಿ ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ರಚಿಸಿದ ‘ತುಳು ಅಪ್ಪೆ’ ಭಾವಚಿತ್ರದ ಅನಾವರಣ ಕಾರ್ಯಕ್ರಮವು ನ.11ರಂದು ಮಧ್ಯಾಹ್ನ 12.30ಕ್ಕೆ ಕೊಡಂಕೂರು ಶ್ರೀಸಾಯಿಬಾಬಾ ಮಂದಿರದ ಆವರಣದಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರಘುನಾಥ ಮಾಬಿಯಾನ್, ಶ್ರೀಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ಭಾವಚಿತ್ರ ಅನಾವರಣಗೊಳಿಸಲಿರುವರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಲಾವಿದ ಪಿ.ಎನ್.ಆಚಾರ್ಯ ಮಾತನಾಡಿ, ಈ ಹಿಂದೆ ಕೋಟಿಚೆನ್ನಯ್ಯ, ವಿಶ್ವಕರ್ಮ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಭಾವಚಿತ್ರ ರಚಿಸಿದ್ದು, ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಅದೇ ರೀತಿ ತುಳು ಅಪ್ಪೆ ಭಾವಚಿತ್ರಕ್ಕೂ ಜನ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ಇದೆ. ಮುಂದೆ ಇದರಲ್ಲಿ ಬದ ಲಾವಣೆ ಬೇಕಾದರೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿ.ಎನ್.ಆಚಾರ್ಯ, ಮಹೇಶ್ ಸುವರ್ಣ, ದೀರಜ್ ಕೆ.ಎಸ್., ಅಶೋಕ್ ಪೂಜಾರಿ, ಮಹಾಬಲ ಅಮೀ್, ರಾಮಚಂದ್ರ ಉಪಸ್ಥಿತರಿದ್ದರು.