×
Ad

ಗ್ರಾಮಗಳಲ್ಲಿ ‘ಗ್ರಾಮ ಒನ್’ ಕೇಂದ್ರ ಪ್ರಾರಂಭ

Update: 2021-11-08 20:22 IST

ಉಡುಪಿ, ನ.8: ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ‘ಗ್ರಾಮ ಒನ್’ ಕೇಂದ್ರ ಆರಂಭವಾಗಲಿದೆ.

ಗ್ರಾಮ ಒನ್ ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಠಾನ ಮಾಡುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾ ಲಯ ತಯಾರಿ ನಡೆಸಿದೆ. ಅದರಂತೆ ಉಡುಪಿ ಜಿಲ್ಲೆಯ ನಗರ ಪ್ರದೇಶವನ್ನು ಹೊರತು ಪಡಿಸಿ, ಉಳಿದ ಗ್ರಾಮಗಳಲ್ಲಿ ಪ್ರಾಂಚೈಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.

ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂಧು ಯೋಜನೆ ಯಡಿಯಲ್ಲಿ ಸುಮಾರು 400ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಈ ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಜಿಲ್ಲೆಗಳ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಉದ್ದೇಶಿಸಿದ್ದು ಪ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ನ.11ರೊಳಗೆ -https://www.karnatakaone.gov.in/Public/GramOneFranchiseeTerms- ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನವೀನ್ ಕುಮಾರ್, ಜಿಲ್ಲಾ ಸಮಾಲೋಚಕರು, (ಮೊಬೈಲ್: 8105467854) ಇವರನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News