×
Ad

ಪುನೀತ್ ರಾಜ್ ಕುಮಾರ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ

Update: 2021-11-08 20:30 IST

ಉಡುಪಿ, ನ.8: ಡಾ.ರಾಜ್ ಕುಮಾರ್ ಅಭಿಮಾನ ಬಳಗ ಹಾಗೂ ಪುನೀತ್ ರಾಜ್ ಕುಮಾರ್ ಬಳಗದ ವತಿಯಿಂದ ಅಗಲಿರುವ ಚಿತ್ರನಟ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುಥಿ ವೀಥಿಕಾದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಒಳಕಾಡು ನಿತ್ಯಾನಂದ, ಕೊಟೆಕ್ ಮಹೇಂದ್ರ ಬ್ಯಾಂಕಿನ ಪ್ರಬಂಧಕ ಶ್ರೀನಿಧಿ, ಸಾಮಾಜಿಕ ಮುಂದಾಳು ಕೆ.ಬಾಲಗಂಗಾಧರ ರಾವ್, ಪ್ರಸಾದ್ ಶೆಟ್ಟಿ, ಸುನಿಲ್ ಶೇಟ್, ಮೈತ್ರಿ ಮಹಮದ್, ಮಿತ್ರ ನರ್ಸಿಂಗ್ ಸ್ಕೂಲಿನ ಪ್ರಾಂಶುಪಾಲೆ ನಿಶಾ ಪ್ರಶಾಂತ್, ಶಿಕ್ಷಕಿಯರಾದ ದಿವ್ಯ, ವನಿತಾ, ಹಾಗೂ ಮಿತ್ರ ನರ್ಸಿಂಗ್ ಸ್ಕೂಲಿನ ವಿದ್ಯಾರ್ಥಿಗಳು, ಪುನೀತ್ ಅಭಿಮಾನಿಗಳು ಭಾಗಿಯಾಗಿದ್ದರು. ವಿಷ್ಣು ಪ್ಲವರ್ ಸ್ಟಾಲಿನ ಮಾಲಕರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News