40 ಲಕ್ಷ ಕಸಾಪ ಸದಸ್ಯತ್ವ ನೋಂದಾಯಿಸುವ ಗುರಿ: ಮಾಯಣ್ಣ
ಉಡುಪಿ, ನ.8: ಕನ್ನಡ ಸಾಹಿತ್ಯ ಪರಿಷತ್‌ನ್ನು ಸಾರ್ವಜನಿಕರ ಪರಿಷತ್ ಆಗಿ ಮಾರ್ಪಡು ಮಾಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ವನ್ನು ಹೊಂದಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಯಣ್ಣ ಭರವಸೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನ ಡಿಜಿಟಲ್ ಸಾಹಿತ್ಯ ಅಭಿಯಾನ ಆರಂಭಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸದಸ್ಯ ಲಭಿಸುವ ಹಾಗೂ ಸದಸ್ಯತ್ವ ಗುರುತಿನ ಚೀಟಿ ಲಭ್ಯವಾಗುವಂತೆ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ 40ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಪರಿಷತ್ತಿಗೆ ಸರಕಾರದಿಂದ ಅತೀ ಹೆಚ್ಚಿನ ಅನುದಾನ ಸಿಗುವಂತೆ ಮಾಡಲಾಗು ವುದು. ಹಿರಿಯ ಸಾಹಿತಿಗಳನ್ನು ಗುರುತಿಸುವುದಲ್ಲದೆ ಉದಯೋನ್ಮುಖ ಕವಿ ಸಾಹಿತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಸಮ್ಮೇಳನಗಳಿಗೆ ಹೆಚ್ಚಿನ ಅನುದಾನ, ಹೊಸ ಮುದ್ರಣಾಲಯ, ಕನ್ನಡ ನುಡಿಗೆ ಆರ್ಥಿಕ ಬಲ, ಪುಸ್ತಕ ಗಳಿಗೆ ಪುರಸ್ಕಾರ, ಸ್ಮಾರ್ಟ್ ಕಾರ್ಡ್, ಸಾಹಿತ್ಯ ಭವನಗಳ ನಿರ್ಮಾಣ, ಗೌರವ ಸದಸ್ಯತ್ವ, ರಾಷ್ಟ್ರೀಯ ಕನ್ನಡ ಪೀಠ ಪ್ರಶಸ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಧೀರ್ ಕಾಂಚನ್, ಮಾಧವ ಖಾರ್ವಿ, ಗುರುಪ್ರಸಾದ್ ಕಡಂಬಾರ್, ಕಾ.ವಿ.ಕೃಷ್ಣದಾಸ್ ಉಪಸ್ಥಿತರಿದ್ದರು.