×
Ad

ಕಾಂಗ್ರೆಸ್ ನ ರೈತ ಪರ ಕಾನೂನನ್ನು ಬಿಜೆಪಿ ಬಹುರಾಷ್ಟ್ರೀಯ ಕಂಪನಿಗಳ ಪರ ಮಾಡಿರುವುದು ದುರಂತ: ಮಂಜುನಾಥ್ ಪೂಜಾರಿ

Update: 2021-11-08 20:41 IST

ಕಾರ್ಕಳ: ಕಳೆದ 2 ವರ್ಷಗಳಿಂದ ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೊರೋನ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡಲಾಗದೆ ಕೊಳತು ಬೀದಿ ಬದಿ ಸುರಿಯುವಂತಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಈ ವರ್ಷ ಪುನಃ ಸಾಲ ಮಾಡಿ‌ ಪುನಃ ಬೆಳೆದು ಪಸಲಿಗೆ ಸರಿಯಾದ ಬೆಂಬಲ ಬೆಲೆ ಇಲ್ಲ.ಅತಿವ್ರಷ್ಡಿ ಮತ್ತು ಅನಾವ್ರಷ್ಠಿಯಿಂದ ತೊಂದರೆ ಒಳಗಾಗಿ ಸಂಕಷ್ಟ ಅನುಭವಿಸಿದವ ರೈತರನ್ನು ಕೇಳುವವರೇ ಇಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ತಂದ ರೈತ ಪರ ಕಾನೂನನ್ನು ಬಿಜೆಪಿ ಸರಕಾರ ತಿದ್ದುಪಡಿ ತಂದು ರೈತರ ಜಮೀನು ಮತ್ತು ಮಾರಾಟದ ಹಕ್ಕನ್ನು ಮೊಟಕುಗೊಳಿಸಿ ಸರ್ಕಾರ ಬಹುರಾಷ್ಟ್ರೀಯ ಕಂಪೆಗಳ ಪರ ನಿಂತಿರುವುದು ಈದೇಶದ ಬಹಳ ದೊಡ್ಡ ದುರಂತ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಆರೋಪಿಸಿದರು

ರೈತ ತನಗೆ ನ್ಯಾಯ ಸಿಗುತ್ತಿಲ್ಲ ಎಂದು ಮನವಿ, ಪ್ರತಿಭಟನೆ ಮಾಡಿ ತನ್ನ ಅಮೂಲ್ಯ ಬದುಕು ಕಳೆದುಕೊಂಡು ಲಕ್ಷಾಂತರ ರೈತರು ಆತ್ಮಹತ್ಯೆ ಹಾದಿ ಹಿಡಿದಿರುವುದು ಜನಪ್ರತಿನಿಧಿಗಳ ಅಮಾನವೀಯ ವರ್ತನೆ ಪ್ರಜಾತಂತ್ರ ವ್ಯವಸ್ಥೆಗೆ ಮಾಡಿರುವ ದ್ರೋಹ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News