ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ
Update: 2021-11-08 21:47 IST
ಮಂಗಳೂರು, ನ.8: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್‌ನ ಕಟ್ಟಡವೊಂದರ ಕೆಳಗೆ ನ.7ರಂದು ಮುಂಜಾವ ಅನುಮಾನಸ್ಪದ ವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರನ್ನು ಉಡುಪಿ ತಾಲೂಕು ಪೆರ್ಡೂರು ಅಲಂಗಾರಿನ ತೌಸೀಫ್(29) ಮತ್ತು ಮಂಗಳೂರು ತಾಲೂಕು ಮಂಜನಾಡಿಯ ಅರ್ಫಾತ್(34) ಎಂದು ಗುರುತಿಸಲಾಗಿದೆ.
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ರಾವ್ ಆ್ಯಂಡ್ ರಾವ್ ಸರ್ಕಲ್‌ನ ಅಂಗಡಿಯೊಂದರ ಶಟರ್ ಬಳಿ ಇಬ್ಬರು ವ್ಯಕ್ತಿಗಳು ಇರುವುದು ಗಮನಕ್ಕೆ ಬಂದಿದ್ದು, ಟಾರ್ಚ್ ಬೆಳಕು ಹಾಯಿಸಿದಾಗ ಇವರಿಬ್ಬರು ಓಡಲು ಯತ್ನಿಸಿದರು. ಇವರನ್ನು ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಇವರ ಚಲನವಲನ ಗಮನಿಸಿದಾಗ ಇವರು ಯಾವುದೋ ಕಳವು ಅಥವಾ ಇತರೇ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದರೆಂಬ ಸಂಶಯ ದೃಢಪಟ್ಟ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.