ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2021-11-08 21:52 IST
ಕಾರ್ಕಳ, ನ.8: ಮಹಿಳೆಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೂರಾಳ್‌ಬೆಟ್ಟು ಗ್ರಾಮದ ಪೂಂಜಾಜೆ ಶಾಲೆಯ ಬಳಿ ನ.7ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ನಾರಾಯಣ ಮೂಲ್ಯ ಎಂಬವರ ಪತ್ನಿ ರತಿ (50) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು, ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದ ಇವರು, ಮನೆಯ ಎದುರಿನ ಬಾವಿಯ ಬಳಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.