ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ವಿರುದ್ಧ ಕಾಫಾ ಕಾಯ್ದೆ

Update: 2021-11-09 09:28 GMT

ಕಾಸರಗೋಡು: ಕೊಲೆ ಯತ್ನ, ಗಾಂಜಾ ಸಾಗಾಟ-ಮಾರಾಟ, ಅಪಹರಣ ಪ್ರಕರಣದ ಆರೋಪಿ ವಿರುದ್ಧ ಕಾಸರಗೋಡು ಕಾಫಾ  ಕಾಯ್ದೆ ಹೂಡಿದ್ದಾರೆ.

ಉಳಿಯತ್ತಡ್ಕ ಬಿಲಾಲ್ ನಗರದ ಅಬ್ದುಲ್ ಸಮದ್ (28) ಎಂಬಾತನ ವಿರುದ್ಧ ಕಾಫಾ ಕಾಯ್ದೆ ಹೂಡಲಾಗಿದೆ. ಈತನ ವಿರುದ್ಧ  20 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಪೊಲೀಸರ ವರದಿಯಂತೆ ಜಿಲ್ಲಾಧಿಕಾರಿ ಅವರು ಕಾಫಾ ಕಾಯ್ದೆ ಯನ್ನು ಹೂಡಿದ್ದಾರೆ.

ಕಾಸರಗೋಡು, ವಿದ್ಯಾನಗರ,  ಬದಿಯಡ್ಕ, ಕುಂಬಳೆ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ಈತನ ಮೇಲಿವೆ.
ಗಾಂಜಾ, ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದಾನೆ. 

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ 28 ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮದ್ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದಲ್ಲದೆ ಮಾದಕ ವಸ್ತು ಸಾಗಾಟ, ಕೊಲೆ ಯತ್ನ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದು, ಈ ಹಿನ್ನಲೆಯಲ್ಲಿ ಈತನ ವಿರುದ್ಧ ಗೂಂಡಾ ಕಾಯಿದೆಯಾದ ಕಾಫಾ ವನ್ನು ಹೂಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News