×
Ad

ದರ್ಪಣ: ವಿಜೇತರಿಗೆ ಬಹುಮಾನ ವಿತರಣೆ

Update: 2021-11-09 19:32 IST

ಉಡುಪಿ, ನ.9: ದರ್ಪಣ ಸ್ಕೂಲ್ ಒಫ್ ಪರ್ಫಾಮಿಂಗ್ ಆರ್ಟ್ಸ್ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ಉಡುಪಿ ಸಿಟಿ ಸೆಂಟರ್ ಮಾಲ್‌ನಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ಗೂಡುದೀಪ ರಚನೆ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು.

ಚಿತ್ರಕಲಾ ಸ್ಪರ್ಧೆ ವಿಜೇತರು: ಎಲ್‌ಕೆಜಿ- 2ನೆ ತರಗತಿ: ಪ್ರ-ಅದಿತಿ ಭಟ್, ದ್ವಿ-ತೇಜಸ್ವಿ, ತೃ-ಮೊಹಮ್ಮದ್ ರೇಹಾ.3-7ತರಗತಿ: ಪ್ರ-ದ್ರಿತಿಖ, ದ್ವಿ-ಪ್ರಥಮ್ ಪಿ. ಕಾಮತ್, ತೃ-ಅವನಿ ವಿಜಯ. 8-10: ಪ್ರ-ರಿತಿಕಾ, ದ್ವಿ-ನಿಶ್ಮಿತಾ ಪ್ರಭು, ತೃ-ಮಾನ್ಯ. ಗೂಡುದೀಪ ರಚನಾ ಸ್ಪರ್ಧೆ: ಪ್ರ-ಅದಿತಿ, ವಿದ್ಯಾ, ಉಷಾ, ದ್ವಿ- ಆಶ್ಲೇಷ್, ಪ್ರದೀಪ್, ಭೀಮನ ಗೌಡ, ತೃ- ಪ್ರತೀಕ್ಷಾ, ಪ್ರೀತಿ, ಶಿಫಾಲಿ.

ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಕಿದಿಯೂರು, ವಿನ್ಯಾಸ ಹೆಗ್ಡೆ ಸಹಕರಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಟಿಸೆಂಟರ್ ಮಾಲ್‌ನ ಹನೀಫ್, ತಾರಾವಜಿತ್, ರಿಲಯನ್ಸ್ ಮಾರ್ಟ್‌ನ ಮೋಹನ್, ದರ್ಪಣ ಸಂಸ್ಥೆಯ ರಮಾನಂದ ಮೂರ್ತಿ, ಸಾನಿಧ್ಯ ಎಜುಕೇಶನ್ ಟ್ರಸ್ಟ್‌ನ ಜಯ ತಂತ್ರಿ ವಿಜೇತರಿಗೆ ಬಹುಮಾನ ವಿತರಿಸಿದರು.

ದರ್ಪಣ ಮುಖ್ಯಸ್ಥೆ ರಕ್ಷಾ ಉಡುಪಿ ಮತ್ತು ರಮ್ಯಾ ಉಡುಪಿ ಸ್ವಾಗತಿಸಿ, ವಂದಿಸಿದರು. ಕಾರ್ತಿಕ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ದರ್ಪಣ ನೃತ್ಯ ಸಂಸ್ಥೆಯ ಮಕ್ಕಳು ನಟ ಪುನೀತ್ ರಾಜಕುಮಾರ್ ಅರಿಗೆ ನೃತ್ಯ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News