ಪತ್ನಿ ಜೊತೆ ಜಗಳವಾಡಿ ನಾಪತ್ತೆಯಾದ ಪತಿ
Update: 2021-11-09 21:01 IST
ಮಲ್ಪೆ, ನ.9: ಪತ್ನಿಯೊಂದಿಗೆ ಜಗಳ ಮಾಡಿ ಮನೆಯಿಂದ ಹೋದ ಪತಿ ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ನ.7ರಂದು ರಾತ್ರಿ 9.30ರ ಸುಮಾರಿಗೆ ನಡೆದಿದೆ.
ನಾಪತ್ತೆಯಾದವರನ್ನು ಮೂಡುತೋನ್ಸೆ ನಿಡಂಬಳ್ಳಿ ಮೂಡುಬೆಟ್ಟು ನಿವಾಸಿ ಶಬನಮ್ ಎಂಬವರ ಪತಿ, ಮಂಗಳೂರಿನ ಕುಂಜತ್ಬೈಲ್ ನಿವಾಸಿ ಮಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ. ಇವರ ಮಧ್ಯೆ ಸಣ್ಣ ಪುಟ್ಟ ವಿಚಾರದಲ್ಲಿ ಜಗಳವಾಗುತ್ತಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆ ಮತ್ತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ನ.7ರಂದು ರಾತ್ರಿ ಪತ್ನಿಯೊಂದಿಗೆ ಜಗಳ ಮಾಡಿದ ನದೀಮ್ ಮನೆ ಬಿಟ್ಟು ಹೋಗಿದ್ದು ಈವರೆಗೆ ವಾಪಸ್ಸು ಬಂದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.