ಮೀನುಗಾರಿಕೆ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಫ್ರಾನ್ಸ್ ಆಗ್ರಹ

Update: 2021-11-09 16:40 GMT

ಪ್ಯಾರಿಸ್, ನ.9: ಮೀನುಗಾರಿಕೆಗೆ ಸಂಬಂಧಿಸಿ ಬ್ರಿಟನ್ ನೊಂದಿಗಿನ ಬಿಕ್ಕಟ್ಟು ಪೂರ್ಣಪ್ರಮಾಣದ ವ್ಯಾಪಾರ ಸಂಘರ್ಷಕ್ಕೆ ತಿರುಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಈ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕು ಎಂದು ಫ್ರಾನ್ಸ್ ಆಗ್ರಹಿಸಿದೆ.

ಹಲವು ವಾರಗಳಿಂದ ಮುಂದುವರಿದಿರುವ ಬಿಕ್ಕಟ್ಟಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗಿದೆ. ಈ ಮಧ್ಯೆ, ಬ್ರಿಟನ್ ನ ಬ್ರೆಕ್ಸಿಟ್ ಸಚಿವ ಡೇವಿಡ್ ಫ್ರಾಸ್ಟ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಟ್ವೀಟ್ ಮಾಡಿರುವ ಫ್ರಾನ್ಸ್‌ನ ಯುರೋಪ್ ಸಚಿವ ಕ್ಲೆಮೆಂಟ್ ಬ್ಯೂನ್ ‘ಫ್ರಾನ್ಸ್ ಮಾತುಕತೆಗೆ ಮುಕ್ತವಾಗಿದೆ. ಆದರೆ ನಮ್ಮ ಒಪ್ಪಂದವನ್ನು ಅನುಷ್ಟಾನಗೊಳಿಸುವ ಜತೆಗೆ ನಮ್ಮ ಮೀನುಗಾರರ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News