×
Ad

ಪಂಜಾಬ್:ಆಮ್ ಆದ್ಮಿ ಪಕ್ಷ ತೊರೆದ ಶಾಸಕಿ ರೂಪಿಂದರ್ ಕೌರ್

Update: 2021-11-10 14:32 IST
Image Source : INDIA TV
 

ಚಂಡೀಗಡ: ಪಂಜಾಬ್ ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕಿ ರೂಪಿಂದರ್ ಕೌರ್ ರೂಬಿ ಅವರು ಪಕ್ಷ ತ್ಯಜಿಸುವುದಾಗಿ ಮಂಗಳವಾರ ರಾತ್ರಿ ಟ್ವೀಟಿಸಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಜಿ ಸಂಚಾಲಕರು, ಎಎಪಿ ಹಾಗೂ  ಭಗವಂತ್ ಮಾನ್ ಜಿ… ನಾನು ಆಮ್ ಆದ್ಮಿ ಪಕ್ಷದ ಸದಸ್ಯತ್ವಕ್ಕೆ ತಕ್ಷಣದಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಈ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಿ’’ ಎಂದು  ರೂಪಿಂದರ್ ಕೌರ್ ರೂಬಿ ಟ್ವೀಟ್ ಮಾಡಿದ್ದಾರೆ.

ರೂಪಿಂದರ್ ಕಾಂಗ್ರೆಸ್ ಸೇರಬಹುದು ಎಂದು ಹೇಳಲಾಗುತ್ತಿದೆ.

ರೂಪಿಂದರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಆಪ್ ನಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಆಪ್ ಶಾಸಕ ಹಾಗೂ ಪಂಜಾಬ್ ವಿಧಾನಸಭೆಯ ವಿಪಕ್ಷ ನಾಯಕ ಹರ್ಪಾಲ್ ಸಿಂಗ್ ಟೀಕಿಸಿದ್ದಾರೆ.

ರೂಬಿ 2017 ರಲ್ಲಿ ಎಎಪಿ ಟಿಕೆಟ್‌ನಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಗೆದ್ದಿದ್ದರು. ಕೆಲ ದಿನಗಳಿಂದ ಅವರು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಕ್ಟೋಬರ್ 29 ರಂದು ಅರವಿಂದ ಕೇಜ್ರಿವಾಲ್ ಅವರು ಬಟಿಂಡಾಗೆ ಭೇಟಿ ನೀಡಿದಾಗ ರೂಬಿ ಅವರು ಪಕ್ಷದ ಕಾರ್ಯಕ್ರಮದ ಸಮಯದಲ್ಲಿ ಇರಲಿಲ್ಲ ಹಾಗೂ  ಅವರ ಚಿತ್ರಗಳು ಸಹ ಎಎಪಿ ಪೋಸ್ಟರ್‌ಗಳಲ್ಲಿ ಕಾಣೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News