×
Ad

ಕೊಂಕಣ ರೈಲು ಮಾರ್ಗ ಉನ್ನತೀಕರಣ: ರೈಲುಗಳ ಸಂಚಾರದಲ್ಲಿ ವ್ಯತ್ಯಯ

Update: 2021-11-10 19:15 IST

ಉಡುಪಿ, ನ.10: ಕೊಂಕಣ ರೈಲು ಮಾರ್ಗದಲ್ಲಿರುವ ವರ್ಣಾ-ಕರ್ಮಾಲಿ ವಿಭಾಗ ನಡುವಿನ ಝುವಾರಿ ಸೇತುವೆ ಹಾಗೂ ಕಾರವಾರ ವಲಯದ ಕರ್ಮಾಲಿ-ತೀವಿಂ ವಿಭಾಗ ನಡುವಿನ ಮಾಂಡೋವಿ ಸೇತುವೆಯ ಉನ್ನತೀಕರಣ ಕಾರ್ಯ ನಡೆದಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ನ.10ರಂದು ಸಂಚಾರ ಪ್ರಾರಂಭಿಸುವ ರೈಲು ನಂ.04695 ಕೊಚ್ಚುವೇಲಿ- ಅಮೃತಸರ ವಿಶೇಷ ರೈಲಿನ ಪ್ರಯಾಣ ಉಡುಪಿ ಮತ್ತು ಮಡಗಾಂವ್ ಜಂಕ್ಷನ್ ನಡುವೆ 180 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ರೈಲು ನಂ.02617 ಎರ್ನಾಕುಲಂ ಜಂಕ್ಷನ್-ಎಚ್.ನಿಝಾಮುದ್ದೀನ್ ವಿಶೇಷ ರೈಲಿನ ಪ್ರಯಾಣ ಕಾರವಾರ ಹಾಗೂ ವರ್ನಾ ವಿಭಾಗದ ನಡುವೆ 60 ನಿಮಿಷ ನಿಯಂತ್ರಿಸಲ್ಪಡುತ್ತದೆ.

ನ.11ರಂದು ಪ್ರಯಾಣ ಪ್ರಾರಂಭಿಸುವ ರೈಲು ನಂ.06164 ತಿರುನಲ್ವೇಲಿ- ದಾದರ್ ವಿಶೇಷ ರೈಲಿನ ಪ್ರಯಾಣವನ್ನು ಉಡುಪಿ ಮತ್ತು ಮಡಗಾಂವ್ ಜಂಕ್ಷನ್ ನಡುವೆ 180 ನಿಮಿಷ ನಿಯಂತ್ರಿಸಲ್ಪಡಲಿದೆ. ಉಳಿದ ರೈಲುಗಳ ಪ್ರಯಾಣವನ್ನು ವಿವಿದೆಡೆಗಳಲ್ಲಿ ನಿರ್ದಷ್ಟ ಕಾಲಾವಧಿಗೆ ನಿಯಂತ್ರಿಸಲ್ಪಡಲಿವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News