ಕೆ-ಮ್ಯಾಟ್ ಪರೀಕ್ಷೆಗೆ ದಿನಾಂಕ ನಿಗದಿ
Update: 2021-11-10 19:45 IST
ಮಂಗಳೂರು, ನ.10: ಕರ್ನಾಟಕ ಖಾಸಗಿ ಸ್ನಾತಕೋತ್ತರ ಪದವಿ ಕಾಲೇಜುಗಳ ಸಂಘವು, ಕರ್ನಾಟಕ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ (ಕೆಎಂಎಟಿ) 2021ಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಪ್ರಕಟಿಸಿದೆ. ಕರ್ನಾಟಕದ ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಮ್ಯಾನೇಜ್ಮೆಂಟ್ ಕೋರ್ಸ್‌ಗಳ ಪ್ರವೇಶಾತಿಗೆ ನ.28ರಂದು ಪರೀಕ್ಷೆ ನಡೆಸಲಾಗುತ್ತದೆ.
ವೇಳಾಪಟ್ಟಿಯ ಪ್ರಕಾರ ನೋಂದಣಿ ಪ್ರಕ್ರಿಯೆ ನ.20ರವರೆಗೆ ಕೊನೆಗೊಳ್ಳಲಿದೆ. ಪರೀಕ್ಷೆಯು ಆನ್‌ಲೈನ್ ಮೂಲಕ ರಾಜ್ಯದ ಆಯ್ದ ನಗರಗಳಲ್ಲಿ ನಡೆಯಲಿದ್ದು, ನಾಲ್ಕು ವಿಭಾಗಗಳಲ್ಲಿ ಒಟ್ಟು 120 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಕೆ-ಮ್ಯಾಟ್ ಪರೀಕ್ಷೆ ಎಂಬಿಎ, ಎಂಸಿಎ ಮತ್ತು ಪಿಜಿಡಿಎಂ ಪ್ರವೇಶಾತಿಗಾಗಿ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗೆ www.kmatindia.com ಅಥವಾ 9513270139/ 9513271046 ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.