×
Ad

ತೆಲಂಗಾಣ: ಬಟ್ಟೆ ಅಂಗಡಿಯೊಳಗೆ ನುಗ್ಗಿದ ಬೈಕ್, ನಾಲ್ವರು ಅಪಾಯದಿಂದ ಪಾರು

Update: 2021-11-10 20:53 IST

ಹೈದರಾಬಾದ್: ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಝಾರ್‌ನಲ್ಲಿ ಸೋಮವಾರ ರಾತ್ರಿ 8.30ರ ಸುಮಾರಿಗೆ ನಿಯಂತ್ರಣ ತಪ್ಪಿದ ಬೈಕ್ ವೊಂದು  ಬಟ್ಟೆ ಅಂಗಡಿಯೊಂದಕ್ಕೆ ಅಪ್ಪಳಿಸಿದ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ವೇಳೆ ಅಂಗಡಿಯಲ್ಲಿದ್ದ ನಾಲ್ವರು ಗ್ರಾಹಕರು ಅಪಾಯದಿಂದ ಪಾರಾಗಿದ್ದಾರೆ.

ನಾಲ್ಕು ಜನರ ಗುಂಪು ಅಂಗಡಿಯೊಳಗೆ ಹರಟೆ ಹೊಡೆಯುತ್ತಿದ್ದಾಗ ನಿಯಂತ್ರಣ ತಪ್ಪಿದ ಬಜಾಜ್ ಪಲ್ಸರ್ ಮೋಟಾರ್‌ ಸೈಕಲ್ ಭಾರೀ  ವೇಗದಲ್ಲಿ ಅಂಗಡಿಯೊಳಗೆ ಪ್ರವೇಶಿಸಿತು. ಅದೃಷ್ಟವಶಾತ್ ನಾಲ್ವರು ಕ್ಷಣಾರ್ಧದಲ್ಲಿ ದೊಡ್ಡ ಅಪಾಯದಿಂದ ಪಾರಾದರು. ಆದರೆ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೌಂಟರ್ ಮೇಲೆ ಎಸೆಯಲ್ಪಟ್ಟಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News