ಸ್ಪೋಟಕ ಸಿಡಿದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು
Update: 2021-11-10 21:48 IST
ಕೋಟ, ನ.10: ಸ್ಪೋಟಕ ವಸ್ತು ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಶಿರಿಯಾರ ಗ್ರಾಮದ ಪಡುಮುಂಡು ನಿವಾಸಿ ದಿನೇಶ ಶೆಟ್ಟಿ(47) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನ.6ರಂದು ಬೆಳಿಗ್ಗೆ ದಿನೇಶ್ ಶೆಟ್ಟಿಯ ಮನೆಯ ಕಾರ್ ಶೆಡ್‌ನಲ್ಲಿ ಇರಿಸಿದ್ದ ಸ್ಪೋಟಕ ವಸ್ತುಗಳು ಪಟಾಕಿ ಕಿಡಿ ತಗಲಿ ಸ್ಪೋಟಗೊಂಡಿತ್ತೆನ್ನಲಾಗಿದೆ. ಇದರಿಂದ ದಿನೇಶ ಶೆಟ್ಟಿ ಹಾಗೂ ಅವರ ಪತ್ನಿ ವಸಂತಿ ಶೆಟ್ಟಿ ತೀವ್ರ ಸುಟ್ಟ ಗಾಯಗೊಂಡಿ ದ್ದರು. ಅಲ್ಲದೆ ಮನೆಯ ಶೆಡ್‌ನಲ್ಲಿರಿಸಿದ್ದ ಕಾರು, ಸ್ಕೂಟಿಗಳು ಸುಟ್ಟಿದ್ದು, ಮನೆಯ ಗೋಡೆಗಳಿಗೆ ಹಾನಿಯಾಗಿದ್ದವು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.