ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
Update: 2021-11-10 21:53 IST
ಅಜೆಕಾರು, ನ.10: ಅನಾರೋಗ್ಯದಿಂದ ಬಳಲುತ್ತಿದ್ದ ಅಂಡಾರು ಗ್ರಾಮದ ಬೈಲು ಮನೆ ಮುಟ್ಟುಪಾಡಿ ನಿವಾಸಿ ಕಿಟ್ಟ ಶೆಟ್ಟಿ(72) ಎಂಬವರು ಮಾನಸಿಕವಾಗಿ ನೊಂದು ನ.9ರಂದು ಬೆಳಗ್ಗೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಮಗನಿಗೆ ಮದುವೆಯಾಗದ ಚಿಂತೆಯಲ್ಲಿ ಮನನೊಂದ ಉದ್ಯಾವರ ಮೇಲ್ಪೇಟೆ ನಿವಾಸಿ ವನಿತಾ ಹೆಗ್ಡೆ(61) ಎಂಬವರು ನ.10ರಂದು ನಸುಕಿನ ವೇಳೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಮುಡಾರು ಗ್ರಾಮದ ಬೈಲು ನಿವಾಸಿ ಜಗದೀಶ್ ರಾವ್(48) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ನ.10ರಂದು ಬೆಳಗಿನ ಜಾವ ಮನೆಯ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.