ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2021-11-10 16:26 GMT

ಮಲ್ಪೆ, ನ.10: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಘಟನೆ ಕೆಮ್ಮಣ್ಣು ಹಂಪನಕಟ್ಟೆ ಎಂಬಲ್ಲಿ ನ.8 ರಂದು ರಾತ್ರಿ ವೇಳೆ ನಡೆದಿದೆ.

ಐರಿನ್ ಡಿಸೋಜ ಮತ್ತು ಅವರ ಮಗ ಜೋಯ್ ಎಂಬವರು ವಿದೇಶದಿಂದ ಬರುತ್ತಿರುವ ತನ್ನ ಪತಿ ಜ್ಯೂನಿಯರ್ ಡಿಸೋಜ ಅವರನ್ನು ಕರೆದುಕೊಂಡು ಬರಲು ನ.7ರಂದು ಬೆಂಗಳೂರಿಗೆ ತೆರಳಿದ್ದರು. ಈ ವೇಳಎ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಒಟ್ಟು 1,80,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರ, ಚಿನ್ನದ ಬ್ರಾಸ್ಲೇಟ್, ಚಿನ್ನದ ಬಳೆ, ಚಿನ್ನದ ಸರ ಹಾಗೂ ಮನೆಯ ಹಾಲ್‌ನಲ್ಲಿದ್ದ 30ಸಾವಿರ ರೂ. ಮೌಲ್ಯದ ಫ್ಲಾಟ್ ಟಿ.ವಿ.ಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News