×
Ad

ಅಂಬಲಪಾಡಿ: ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

Update: 2021-11-10 22:02 IST

ಉಡುಪಿ, ನ.10: ಅಂಬಲಪಾಡಿ ಸ್ವಸ್ತಿಕ್ ಇಲೆವೆನ್ ಕ್ರಿಕೆಟರ್ಸ್‌ ಮತು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ, ಉಡುಪಿ ಜಿಪಂ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷೆ ವಿಜಯಾ ಜಿ.ಬಂಗೇರ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ರೋಹಿಣಿ ಪೂಜಾರಿ, ಸಮಾಜ ಸೇವಕಿ ವಿದ್ಯಾ ಶೆಟ್ಟಿ, ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್, ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಗ್ರಾಪಂ ಸದಸ್ಯ ರಾಜೇಶ್ ಸುವರ್ಣ, ಅಂಬೇಡ್ಕರ್ ಯುವ ಸೇನೆ ಉಡುಪಿ ತಾಲೂಕು ಅಧ್ಯಕ್ಷ ದಯಾನಂದ್ ಕಪ್ಪೆಟ್ಟು, ಸಾಮಾಜಿಕ ಕಾರ್ಯಕರ್ತ ಸತೀಶ್ ಭಂಡಾರಿ, ಸ್ವಸ್ತಿಕ್ ಗಿಐ ಕ್ರಿಕೆಟರ್ಸ್‌ ಅಧ್ಯಕ್ಷ ಪ್ರಶಾಂತ್ ಅಂಬಲಪಾಡಿ, ಪದಾಧಿಕಾರಿಗಳಾದ ಅಜಿತ್ ಕಪ್ಪೆಟ್ಟು, ಸುಜಿತ್ ಕಪ್ಪೆಟ್ಟು, ಕಾರ್ತಿಕ್ ಆಚಾರ್ಯ, ಕೀರ್ತಿ ಕಪ್ಪೆಟ್ಟು, ಸುನಿಲ್ ಕುಮಾರ್ ಅಂಬಲಪಾಡಿ, ಕಾರ್ತಿಕ್ ಅಂಬಲಪಾಡಿ, ನಿಶಾಂತ್ ಕಪ್ಪೆಟ್ಟು, ಗಣಪತಿ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News