×
Ad

ಮುಖ್ಯ ಪುಸ್ತಕ ಬರಹಗಾರರ ತರಬೇತಿ ಕಾರ್ಯಾಗಾರ

Update: 2021-11-10 22:07 IST

ಉಡುಪಿ, ನ.10: ಉಡುಪಿ ಜಿಪಂ, ಬ್ರಹ್ಮಾವರ, ಕಾಪು ತಾಪಂ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವುಗಳ ಆಶ್ರಯದಲ್ಲಿ ಮುಖ್ಯ ಪುಸ್ತಕ ಬರಹಗಾರರ ತರಬೇತಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಪಂ ಯೋಜನಾ ನಿರ್ದೇಶಕ ಬಾಬು ಮಾತನಾಡಿ, ಮುಖ್ಯ ಪುಸ್ತಕ ಬರಹಗಾರರು ಪ್ರಾಮಾಣಿಕ ಮತ್ತು ಶೃದ್ಧೆಯಿಂದ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುವುದರಿಂದ ಸಂಜೀವಿನಿ ಒಕ್ಕೂಟ ಜಿಲ್ಲೆಯಲ್ಲಿ ಮಾದರಿ ಆಗುತ್ತದೆ. ಸಂಜೀವಿನಿ ಸಂಘ ರಚಿಸಿ ಅವರಿಗೆ ಆರ್ಥಿಕ ಸಹಕಾರ ಮಾಡುವ ಮೂಲಕ ಗ್ರಾಮೀಣ ಬಲವರ್ಧನೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು.

ಅಥಿತಿಗಳಾಗಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಗ್ರಾಮ ಮಟ್ಟದ ಮುಖ್ಯ ಪುಸ್ತಕ ಬರಗಾರರಿಗೆ ತರಬೇತಿ ನೀಡಿದರು. ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯಸ್ಥಾಪಕ ಪ್ರಭಾಕರ ಆಚಾರ್, ಜಿಲ್ಲಾ ವ್ಯವಸ್ಥಾಪಕರಾದ ನವ್ಯಾ, ಅವಿನಾಶ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕ್ಲಸ್ಟರ್ ಸೂಪರ್ವೈಸರ್ ಸುಧೀರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕ್ಲಸ್ಟರ್ ಸೂಪರ್ವೈಸರ್ ಸುಜಾತ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News