×
Ad

ಸಾರಿಗೆ ಸಮಸ್ಯೆ; ಸಾರ್ವಜನಿಕ ದೂರುಗಳಿಗೆ ಶೀಘ್ರ ಪರಿಹಾರ: ಡಿಸಿ ಕೂರ್ಮಾರಾಮ್

Update: 2021-11-10 22:15 IST

ಉಡುಪಿ, ನ.10: ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಸಾರ್ವಜನಿಕರು ಸಲ್ಲಿಸಿರುವ ದೂರುಗಳ ಕುರಿತಂತೆ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲಾ್ಲಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಇಂದು ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸುಧೀರ್ ಕಾಂಚನ್ ಶಿರಿಯಾರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಸರಕಾರಿ ಬಸ್‌ಗಳನ್ನು ಓಡಿಸಬೇಕು. ಹಳ್ಳಿಗಳಿಗೆ ಸಂಚರಿಸಲು ಪರವಾನಗಿ ಪಡೆದು, ಸಂಚರಿಸಿದೇ ಇರುವ ಖಾಸಗಿ ಬಸ್‌ಗಳ ಪರವಾನಗಿ ಯನ್ನು ರದ್ದು ಮಾಡಬೇಕು. ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರೀಕರಿಗೆ ರಿಯಾಯತಿ ದರ ನೀಡಬೇಕು. ಪರವಾನಗಿ ಇಲ್ಲದೇ ಸಂಚರಿಸುತ್ತಿರುವ ಬಸ್‌ಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಶಶಿಧರ್ ಮಾತನಾಡಿ, ಬಸ್‌ಗಳಲ್ಲಿ ದರ ಹೆಚ್ಚಳ ಹಿಂಪಡೆಯಬೇಕು. ಮಣಿಪಾಲ-ಮಂಗಳೂರು ಮಾರ್ಗವಾಗಿ ಸಂಚರಿ ಸುತ್ತಿದ್ದ ಸರಕಾರಿ ಬಸ್ ಸೇವೆಯನ್ನು ಪುನರಾರಂಭಿಸಬೇಕು, ಸರಕಾರಿ ಬಸ್ ಗಳ ರೂಟ್ ಸಂಖ್ಯೆಯನ್ನು ಹೆಚ್ಚಿಸಬೇಕು, ಖಾಸಗಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ನಿಗದಿತ ಸೀಟುಗಳನ್ನು ಬಿಟ್ಟು ಕೊಡುವ ಕುರಿತಂತೆ ಮನವಿ ಮಾಡಿದರು.

ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್, ಕೆಎಸ್ಸಾರ್ಟಿಸಿ ಅಧಿಕಾರಿಗಳು ಹಾಗೂ ಖಾಸಗಿ ಬಸ್‌ಗಳ ಮಾಲಕರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News