ಪ್ರತ್ಯೇಕ ಪ್ರಕರಣ: ಮೂವರು ನಾಪತ್ತೆ
Update: 2021-11-11 22:02 IST
ಕೋಟ, ನ.11: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಗಿಳಿಯಾರು ಗ್ರಾಮದ ಸರಕಾರಿ ಆಸ್ಪತ್ರೆಯ ಬಳಿಯ ನಿವಾಸಿ ಗಿಳಿಯಾರು ಗ್ರಾಮ ಉಮೇಶ (45) ಎಂಬವರು ನ.8ರಂದು ರಾತ್ರಿ ಬೀಡಿ ತರಲು ಕೋಟ ಪೇಟೆಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಭದ್ರಾವತಿ ಮೂಲದ, ಸಿದ್ದಾಪುರ ಗ್ರಾಮದ ಜನ್ಸಾಲೆ ನಿವಾಸಿ ಮಹೇಶ(45) ಎಂಬವರು ಜು.4ರಂದು ಮನೆ ಬಿಟ್ಟು ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಕೊರಂಗ್ರಪಾಡಿ ಗ್ರಾಮದ ಬೊಮ್ಮನಪಾದೆ ರಸ್ತೆಯ ಶೆಟ್ಟಿ ಕಂಪೌಂಡ್ ಬಳಿಯ ನಿವಾಸಿ ಪ್ರಸನ್ನ(43) ಎಂಬವರು ತನ್ನ ತಾಯಿಯ ಮರಣದ ಮರುದಿನ ಅ.26ರಂದು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋದವರು ಈವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.