×
Ad

ಮಂಗಳೂರು: 'ಅಲ್ ಬಿರ್ರ್ ಟೀಚರ್ ರೆಸಿಡೆನ್ಸಿಯಲ್ ಕ್ಯಾಂಪ್' ಸಮಾರೋಪ

Update: 2021-11-12 18:21 IST

ಮಂಗಳೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿರುವ ಅಲ್ ಬಿರ್ರ್ ಶಾಲೆಗಳ ಶಿಕ್ಷಕರಿಯರ ಹುದ್ದೆಗೆ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಆಯೋಜಿಸಲ್ಪಟ್ಟ ಐದು ದಿನಗಳ ನಡೆದ ರೆಸಿಡೆನ್ಸಿಯಲ್ ಕ್ಯಾಂಪ್ ಅದ್ದೂರಿಯಾಗಿ ಮುಕ್ತಾಯಗೊಂಡಿದೆ.

ಗುರುಪುರ ಕೈಕಂಬದ ಮಾತಾ ಕೃಪಾ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಅಲ್ ಬಿರ್ರ್ ಆಡಳಿತ ನಿರ್ದೇಶಕರಾದ ಕೆ.ಪಿ. ಮುಹಮ್ಮದ್ ತಲಶ್ಶೆರಿ ಅವರ ಅಧ್ಯಕ್ಷತೆಯಲ್ಲಿ, ಮಿತ್ತಬೈಲ್ ಕೇಂದ್ರ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಸಾಗರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ತರಬೇತುದಾರಾದ ರಫೀಕ್ ಮಾಸ್ಟರ್ ಆತೂರು ಕೈಕಂಬ ಅಲ್ ಬಿರ್ರ್ ಕೋರ್ಡಿನೇಟರ್ ಶರೀಫ್ ಮಳಲಿ, ಹಮೀದ್, ಕರಾಯ ಅಲ್ ಬಿರ್ರ್ ಸ್ಕೂಲ್ ಚೇರ್ಮಾನ್ ಅಬೂಬಕ್ಕರ್ ಸಿದ್ದೀಕ್ ಮತ್ತಿತರರು ಉಪಸ್ಥಿತರಿದ್ದರು.

ಅಲ್ ಬಿರ್ರ್ ಟ್ರೈನಿಂಗ್ ಕನ್ವಿನರ್ ಫೈಝಲ್ ಹುದವಿ ಕೇರಳ ಸ್ವಾಗತಿಸಿ, ಕರ್ನಾಟಕ ಅಲ್ ಬಿರ್ರ್ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ವಂದಿಸಿದರು.

ತರಬೇತಿ ಶಿಬಿರ: ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿವಿಧ ವಿಷಯಗಳಲ್ಲಿ ಬಗ್ಗೆ ಕೆ.ಪಿ. ಮುಹಮ್ಮದ್, ಡಾ. ಇಸ್ಮಾಯಿಲ್ ಮುಜದ್ದಿದಿ, ಫೈಝಲ್ ಹುದವಿ, ನೌಫಲ್ ವಾಫಿ ಮೇಲಾಟ್ಟೂರ್, ರಶೀದ್ ಮಣಿಯೂರು, ಡಾ. ಕೆ.ವಿ. ಮುಹಮ್ಮದ್, ರಫೀಕ್ ಮಾಸ್ಟರ್ ಆತೂರು, ಜಮಾಲ್ ದಾರಿಮಿ ಕೈಕಂಬ, ಜಾಬಿರ್ ಹುದವಿ ಚಾನಡುಕ್ಕಂ, ಅಬ್ದುಲ್ ಮಜೀದ್ ಹುದವಿ ಕಡಬ, ಸಿರಾಜ್ ಹುದವಿ ಬದಿಮಲ, ಅನೀಸ್ ಕೌಸರಿ, ಅಬೂಬಕ್ಕರ್ ಕರ್ನಾಟಕ ಸ್ವದಖತುಲ್ಲ ಫೈಝಿ ಅಬ್ದುಸ್ಸಮದ್ ಸಾಲೆತ್ತೂರು ತರಗತಿ ನಡೆಸಿಕೊಟ್ಟರು..

ಪ್ರತಿಭಾ ಪುರಸ್ಕಾರ: 
ರಮಝಾನ್ ತಿಂಗಳಲ್ಲಿ ಅಲ್ ಬಿರ್ರ್ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಇಸ್ತಿಖಾಮ- ಕುರ್ ಆನ್ ಪಾರಾಯಣ ಸ್ಪರ್ಧೆಯಲ್ಲಿ ಕೇರಳ-ಕರ್ನಾಟಕ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡಿದ ಫಾತಿಮತ್ ಝ್ರಹ್ರಾಳಿಗೆ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಅಕಾಡೆಮಿಕ್ ಬೋರ್ಡ್ ರಚನೆ: ಅಲ್ ಬಿರ್ರ್ ಕೇಂದ್ರ ಸಮಿತಿಯ ಅಧೀನದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕವಾದ ಅಕಾಡೆಮಿಕ್ ಬೋರ್ಡ್ ಅನ್ನು ರಚಿಸಲಾಯಿತು. ಶಿಕ್ಷಣ ತಜ್ಞರು, ತರಬೇತುದಾರರು, ಮೇಧಾವಿಗಳನ್ನೊಳಗೊಂಡ ತಂಡವನ್ನು ರಚಿಸಿ ಆಧುನಿಕ ಶಿಕ್ಷಣದ ಸಾಧಕ- ಬಾಧಕಗಳ ಸುದೀರ್ಘ ಚರ್ಚೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News