ಸಂಗೀತ ಹಬ್ಬದ ವೇಳೆ ದುರಂತ:ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು,ಮೃತರ ಸಂಖ್ಯೆ 9ಕ್ಕೇರಿಕೆ
ಹೂಸ್ಟನ್: ರಾಪರ್ ಟ್ರಾವಿಸ್ ಸ್ಕಾಟ್ ಅವರ ಆಸ್ಟ್ರೋವರ್ಲ್ಡ್ ಫೆಸ್ಟಿವಲ್‌ನಲ್ಲಿ ಜನಜಂಗುಳಿಯಿಂದ ಉಂಟಾದಾಗ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ 22ರ ವಯಸ್ಸಿನ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಆಕೆಯ ಕುಟುಂಬ ತಿಳಿಸಿದೆ.
ಟೆಕ್ಸಾಸ್ ಎ & ಎಂ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯಲಿದ್ದ ಭಾರತಿ ಶಹಾನಿ ಅವರು ನವೆಂಬರ್ 5 ರಂದು ಸಂಭವಿಸಿದ ದುರಂತದಲ್ಲಿ ಮಿದುಳಿನ ತೀವ್ರ ಗಾಯದಿಂದ ಬುಧವಾರ ರಾತ್ರಿ ನಿಧನರಾದರು. ಆಕೆಯ ಕುಟುಂಬದ ಪ್ರಕಾರ ಆಕೆ ವೆಂಟಿಲೇಟರ್‌ನಲ್ಲಿದ್ದರು.
ಶುಕ್ರವಾರ ರಾತ್ರಿ ರಾಪ್ ಸ್ಟಾರ್ ಸ್ಕಾಟ್ ಅವರ ಆಸ್ಟ್ರೋವರ್ಲ್ಡ್ ಫೆಸ್ಟಿವಲ್‌ನಲ್ಲಿ ಅಭಿಮಾನಿಗಳ ಕಾಲ್ತುಳಿತಕ್ಕೆ 14 ರಿಂದ 27 ವರ್ಷದೊಳಗಿನ ಒಂಬತ್ತು ಜನರನ್ನು ಬಲಿ ಪಡೆಯಿತು. ಹಲವು ಜನರಿಗೆ ಗಾಯವಾಯಿತು. ದುರಂತದ ಬಗ್ಗೆ ತನಿಖೆ ಮುಂದುವರಿದಿದೆ.
ಆಸ್ಟ್ರೋವರ್ಲ್ಡ್ ಫೆಸ್ಟಿವಲ್‌ನಲ್ಲಿನ ಗೊಂದಲದ ಸಮಯದಲ್ಲಿ ಉಂಟಾದ ಗಾಯಗಳಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಭಾರತಿ ಕುಟುಂಬ ಗುರುವಾರ ದೃಢಪಡಿಸಿದೆ.