​ಮಣಿಪಾಲ: ಮಧುಮೇಹಿಗಳಿಗೆ ಉಚಿತ ಪಾದದ ತಪಾಸಣೆ

Update: 2021-11-12 16:06 GMT

ಮಣಿಪಾಲ, ನ.12: ವಿಶ್ವಾದಾದ್ಯಂತ ನ.14ರಂದು ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ. ಮಧುಮೇಹಿಗಳಲ್ಲಿ ಆರೋಗ್ಯದ ಅರಿವು ಮೂಡಿಸುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುವ ಕ್ರಮ, ಮಧುಮೇಹ ನಿಯಂತ್ರಣದಲ್ಲಿ ಇಡದೇ ಇದ್ದಲ್ಲಿ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗ್ರತಿಯನ್ನು ಈ ದಿನದಂದು ಮೂಡಿಸಲಾಗುತ್ತದೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಆಂಗವಾಗಿ ನ.15ರಿಂದ 19ರವರೆಗೆ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆ ಯನ್ನು ಹಮ್ಮಿಕೊಳ್ಳಲಾಗಿದೆ. ಪಾದದ ತೊಂದರೆ ಇರುವ ಮಣಿಪಾಲ್ ಆರೋಗ್ಯಕಾರ್ಡ್ ಹೊಂದಿದವರಿಗೆ ಶೇ.20 ಕಡಿತದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು.

ಈ ಸಮಯದಲ್ಲಿ ಕೋವಿಡ್‌ನ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಉಚಿತ ತಪಾಸಣೆ ಯನ್ನು ಕಾದಿರಿಸಲು ದೂ.ಸಂಖ್ಯೆ: 0820-2923054ನ್ನು ಬೆಳಗ್ಗೆ 8:30ರಿಂದ ಸಂಜೆ 4:30ರವರೆಗೆ ಸೋಮವಾರದಿಂದ ಶನಿವಾರದವರೆಗೆ ಸಂಪರ್ಕಿಸ ಬಹುದು ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News